ಪ್ರಧಾನ ಸುದ್ದಿ

ಕಾಂಗ್ರೆಸ್‍ನ 2 ಬೇಡಿಕೆಗಳಿಗೆ ಅಸ್ತು

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ವಿಧೇಯಕ ಅಂಗೀಕಾರಕ್ಕಿದ್ದ ಅಡ್ಡಿಗಳು...

ಕಾಂಗ್ರೆಸ್‍ನ 2 ಬೇಡಿಕೆಗಳಿಗೆ ಅಸ್ತು
ಪ್ರಧಾನಿ ನರೇಂದ್ರ ಮೋದಿ
Published On :
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ವಿಧೇಯಕ ಅಂಗೀಕಾರಕ್ಕಿದ್ದ ಅಡ್ಡಿಗಳು ನಿವಾರಣೆಯಾಗುವ ಹಂತ ತಲುಪಿದೆ. 
ಜಿಎಸ್‍ಟಿಗೆ ಸಂಬಂಧಿಸಿ ಕಾಂಗ್ರೆಸ್ ಇಟ್ಟಿದ್ದ ಮೂರು ಬೇಡಿಕೆಗಳ ಪೈಕಿ ಎರಡಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ಮಾಜಿ ಪ್ರಧಾನಿ ಮನಮೋಹನ್‍ಸಿಂಗ್ ನಡುವೆ ನಡೆದ ಮಾತುಕತೆ ವೇಳೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಿಎನ್‍ಎನ್- ಐಬಿಎನ್ ವರದಿ ಮಾಡಿದೆ.
ಜಿಎಸ್‍ಟಿಗೆ ಶೇ.18ರ ಮಿತಿ ಹೇರಬೇಕು ಮತ್ತು ಉತ್ಪಾದನೆ ಮಾಡುವಂಥ ರಾಜ್ಯಗಳಿಗೆ ಹೇರಲಾಗುವ ಶೇ.1ರ ತೆರಿಗೆಯನ್ನು ಮನ್ನಾ ಮಾಡಬೇಕು ಎಂಬ ಕಾಂಗ್ರೆಸ್‍ನ ಎರಡು ಕೋರಿಕೆಗಳಿಗೆ ಪ್ರಧಾನಿ ಮೋದಿ ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಮೂರನೆಯ ಬೇಡಿಕೆಯಲ್ಲಿ ಸಹಮತ ಮೂಡಿಲ್ಲ. 
ಜಿಎಸ್‍ಟಿ ಮಂಡಳಿಯಲ್ಲಿ ರಾಜ್ಯಗಳ ಕೋಟಾವನ್ನು ಬದಲಿಸಬೇಕು ಎಂಬ ಬೇಡಿಕೆಯನ್ನು ಒಪ್ಪಲು ಕೇಂದ್ರ ಸರ್ಕಾರ ಸಿದ್ಧವಿಲ್ಲ ಎನ್ನಲಾಗಿದೆ. ಇದೇ ವೇಳೆ, ಮಾತನಾಡಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ``ಎರಡೂ ಪಕ್ಷಗಳು ಜಿಎಸ್ ಟಿಗೆ ಸಂಬಂಧಿಸಿದ ತಮ್ಮ ನಿಲುವನ್ನು ಸ್ಪಷ್ಟಪಡಿಸಿವೆ. 
ಮುಂದಿನ ದಿನಗಳಲ್ಲಿ ಇಂತಹುದೇ ಇನ್ನಷ್ಟು ಸಭೆಗಳು ನಡೆಯಲಿವೆ'' ಎಂದಿದ್ದಾರೆ. ಜತೆಗೆ, ಚಳಿಗಾಲದ ಅಧಿವೇಶನವು ಸುಸೂತ್ರವಾಗಿ ನಡೆಯುವ ಬಗ್ಗೆಯೂ ಮಾತುಕತೆ ನಡೆಸಲಾಗಿದೆ ಎಂದೂ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.