ವರ್ಗೀಸ್ ಕುರಿಯನ್ ೯೪ನೆ ಜಯಂತಿಗೆ ಗೂಗಲ್ ಡೂಡಲ್ ಸಂಭ್ರಮ
ಮುಖಪುಟದಲ್ಲಿ ಡೂಡಲ್ ಬಿಡಿಸುವ ಮೂಲಕ ಅಂತರ್ಜಾಲ ದೈತ್ಯ ಗೂಗಲ್, ವರ್ಗೀಸ್ ಕುರಿಯನ್ ಅವರ ೯೪ನೆ ಜನ್ಮ ಜಯಂತಿಯನ್ನು ಸಂಭ್ರಮಿಸಿದೆ.

ನವದೆಹಲಿ: ಮುಖಪುಟದಲ್ಲಿ ಡೂಡಲ್ ಬಿಡಿಸುವ ಮೂಲಕ ಅಂತರ್ಜಾಲ ದೈತ್ಯ ಗೂಗಲ್, ವರ್ಗೀಸ್ ಕುರಿಯನ್ ಅವರ ೯೪ನೆ ಜನ್ಮ ಜಯಂತಿಯನ್ನು ಸಂಭ್ರಮಿಸಿದೆ.
ಹಾಲಿನ ಕ್ರಾಂತಿಗೆ ಕಾರಣವಾದ ವರ್ಗೀಸ್ ಕುರಿಯನ್ ಹಸುವಿನ ಜೊತೆಗೆ ಹಾಲು ಡಬ್ಬಿ ಹಿಡಿದು ಕುಳಿತಿರುವ ಚಿತ್ರವನ್ನು ಗೂಗಲ್ ಪ್ರಕಟಿಸಿದೆ.
'ಬಿಳಿ ಕ್ರಾಂತಿಯ ಹರಿಕಾರ' ಎಂದೇ ಪ್ರಖ್ಯಾತರಾದ ಕುರಿಯನ್ ರೈತರ ಸಹಕಾರ ಸಂಘಗಳನ್ನು ಕಟ್ಟುವ ಮೂಲಕ ಹಾಲು ಕೊರತೆ ದೇಶವನ್ನು ಅತಿ ಹೆಚ್ಚು ಹಾಲು ಉತ್ಪಾದಿಸಿವ ದೇಶವನ್ನಾಗಿ ಬದಲಾಯಿಸಿದ್ದರು. ಮೊದಲ ಬಾರಿಗೆ ೧೯೯೮ರಲ್ಲಿ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶ ಅಮೆರಿಕಾವನ್ನು ಭಾರತ ಹಿಂದಿಕ್ಕಿತ್ತು.
ಅವರು ಡೈರಿ ಉತ್ಪನ್ನಗಳ ಅಮೂಲ್ ಎಂಬ ಸಂಸ್ಥೆಯನ್ನು ಕೂಡ ಕಟ್ಟಿ ಬೆಳೆಸಿದ್ದರು.
ತಮ್ಮ ೯೦ನೆಯ ವಯಸ್ಸಿನಲ್ಲಿ ವರ್ಗೀಸ್ ಕುರಿಯನ್ ಅವರು ಸೆಪ್ಟಂಬರ್ ೯ ೨೦೧೨ರಲ್ಲಿ ಗುಜರಾತ್ ನಲ್ಲಿ ನಿಧನರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


