ಅಸಹಿಷ್ಣುತೆ ವಿವಾದ ಬಗ್ಗೆ ಕೇಂದ್ರ ಸರ್ಕಾರ ಚರ್ಚೆಗೆ ತಯಾರಿದೆ : ವೆಂಕಯ್ಯ ನಾಯ್ಡು
ಅಸಹಿಷ್ಣುತೆ ವಿವಾದದಲ್ಲಿ ಕೇಂದ್ರ ಸರ್ಕಾರ ಚರ್ಚೆಗೆ ತಯಾರಿದೆ ಎಂದು ಸಂಸದೀಯ ವ್ಯವಹಾರಖಾತೆ ಸಚಿವ ವೆಂಕಯ್ಯ...

Published On :
ನವದೆಹಲಿ: ಅಸಹಿಷ್ಣುತೆ ವಿವಾದದಲ್ಲಿ ಕೇಂದ್ರ ಸರ್ಕಾರ ಚರ್ಚೆಗೆ ತಯಾರಿದೆ ಎಂದು ಸಂಸದೀಯ ವ್ಯವಹಾರಖಾತೆ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂಬುದು ಬರೀ ಆರೋಪವಷ್ಟೇ. ಇದನ್ನು ನಾವು ಒಪ್ಪುವುದಿಲ್ಲ. ದಾದ್ರಿ ಸೇರಿದಂತೆ ಇನ್ನಿತರ ಘಟನೆಗಳಲ್ಲಿ ಕೇಂದ್ರ ಸರ್ಕಾರದ್ದಾಗಲೀ, ಬಿಜೆಪಿಯದ್ದಾಗಲೀ ಕೈವಾಡವಿಲ್ಲ. ಇಂಥಾ ಘಟನೆಗಳು ಎದುರಾದರೆ ಅದರ ವಿರುದ್ಧ ರಾಜ್ಯ ಸರ್ಕಾರಗಳು ಕ್ರಮ ತೆಗೆದುಕೊಳ್ಳಬೇಕು.
ಪ್ರತಿಯೊಬ್ಬರೂ ಸಹಿಷ್ಣುತೆಯಿಂದ ವ್ಯವಹರಿಸಬೇಕು. ಈ ವಿವಾದದಲ್ಲಿ ಯಾವ ರೀತಿಯ ಚರ್ಚೆಯನ್ನು ಮಾಡಬೇಕೆಂದು ವಿಪಕ್ಷಗಳು ಆಗ್ರಹಿಸುತ್ತವೆ ಎಂಬುದನ್ನು ಸರ್ವಪಕ್ಷ ಸಭೆಯಲ್ಲಿ ತಿಳಿಸಬೇಕು ಎಂದು ನಾಯ್ಡು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


