ಪ್ರಧಾನ ಸುದ್ದಿ

ಬೆಳಗಾವಿಯಲ್ಲಿ ಘರ್ಷಣೆ: 22 ಜನರ ಬಂಧನ

ಭಾನುವಾರ ರಾತ್ರಿ11.30ರ ಹೊತ್ತಿಗೆ ಶಹಾಪುರದ ಆಚಾರ ಗಲ್ಲಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಒಂದು ಕೋಮಿನವರು ...

ಬೆಳಗಾವಿಯಲ್ಲಿ ಘರ್ಷಣೆ: 22 ಜನರ ಬಂಧನ
ಸಾಂದರ್ಭಿಕ ಚಿತ್ರ
Published On :
ಬೆಳಗಾವಿ: ಭಾನುವಾರ ರಾತ್ರಿ11.30ರ ಹೊತ್ತಿಗೆ ಶಹಾಪುರದ ಆಚಾರ ಗಲ್ಲಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಒಂದು ಕೋಮಿನವರು ಶಿವಾಜಿ ಕೋಟೆ (ಕಿಲ್ಲಾ) ನಿರ್ಮಿಸಿ ಕಾರ್ಯಕ್ರಮ ಏರ್ಪಡಿಸಿದ್ದರು. ಆಗ ಇನ್ನೊಂದು ಕೋಮಿನವರು ಕಾರ್ಯಕ್ರಮ ನಡೆಯುತ್ತಿರುವ ಸ್ಥಳದತ್ತ ಕಲ್ಲು, ಬಾಟಲಿ, ಇಟ್ಟಿಗೆಗಳನ್ನು ಎಸೆದಿದ್ದಾರೆ. 
ಇದರಿಂದ ಇಬ್ಬರಿಗೆ ಗಂಭೀರವಾಗಿ ಗಾಯವಾಗಿದೆ. ಈ ಘಟನೆ ಕುರಿತು ಶಹಾಪುರ ಠಾಣೆಯಲ್ಲಿ ದೂರು ನೀಡಿ ಮರಳಿ ಬರುತ್ತಿದ್ದವರ ಮೇಲೆ ಮತ್ತೆ ನವಿಗಲ್ಲಿಯಲ್ಲಿ ಏಕಾಏಕಿ ಕಲ್ಲು, ಬಾಟಲಿ ತೋರಾಟ ನಡೆಸಲಾಗಿದೆ. ಆಗ ರೊಚ್ಚಿಗೆದ್ದ ಇ್ನನೊಂದು ಕೋಮಿನವರು ನವಿಗಲ್ಲಿ ಯಲ್ಲಿ ನುಗ್ಗಿ ಗಲಾಟೆ ಮಾಡಿದ್ದಾರೆ. 
ಈ ಸಂದರ್ಭದಲ್ಲಿ ಕಿಡಿಗೇಡಿಗಳು ಪ್ರಾರ್ಥನಾ ಮಂದಿರದತ್ತ ಸಹ ಕಲ್ಲು ಎಸೆದಿದ್ದಾರೆ. ಎರಡುಕೋಮಿನವರು ಪರಸ್ಪರ ಕಲ್ಲು ತೋರಾಟ ನಡೆಸಿದ್ದರಿಂದ ಕೆಲ ಗಂಟೆಗಳ ಕಾಲ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. 
ಆಗ ಸ್ಥಳಕ್ಕೆ ಬಂದ ಶಹಾಪುರ ಠಾಣೆ ಇನ್ಸಪೆಕ್ಟರ್ ಡಿ.ಸಿ. ಲಕ್ಕಣ್ಣವರ ನೇತೃತ್ವದ ಪೊಲೀಸರು ತಂಡ, ಪರಿಸ್ಥಿತಿ ಕೈಮೀರದಂತೆ ನಿಯಂತ್ರಿಸಿತು. ಘಟನೆ ಸಂಭವಿಸಿದ ಪ್ರದೇಶದ ರಸ್ತೆ ತುಂಬಾ ಕಲ್ಲು, ಬಾಟಲಿ, ಇಟ್ಟಿಗೆಗಳು ಪುಡಿಪುಡಿಯಾಗಿ ಬಿದ್ದಿದ್ದವು. ಘಟನೆಯಲ್ಲಿ 10 ಕ್ಕೂ ಹೆಚ್ಚು ಅಟೋ, ಕಾರು, ಟಂಟಂ, ದ್ವಿಚಕ್ರ ವಾಹನ ಜಖಂಗೊಂಡಿವೆ. 
ಘಟನೆ ನಡೆದ ಸ್ಥಳ ಹಾಗೂ ನವೀ ಗಲ್ಲಿಯ ಪ್ರಾರ್ಥನಾ ಮಾಂದಿರಕ್ಕೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಈ ಮಧ್ಯೆ ತಾಲೂಕಿನಉಚಗಾಂವಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ಪ್ರಾರ್ಥನಾ ಮಂದಿರವನ್ನು ಧ್ವಂಸಗೊಳಿಸಲು ಯತ್ನಿಸಲಾಗಿದೆ. ಆದರೆ, ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.