ಪ್ರಧಾನ ಸುದ್ದಿ

ಉಗ್ರ ನಿಗ್ರಹಕ್ಕೆ ಬಹುವಿಧ ವ್ಯೂಹ ರಚನೆ ಅತ್ಯಗತ್ಯ: ಪ್ರಧಾನಿ ಮೋದಿ

ಇಡೀ ವಿಶ್ವವನ್ನು ಪೀಡಿಸುತ್ತಿರುವ ಭಯೋತ್ಪಾದನೆ ಮತ್ತು ಉಗ್ರರ ನಿಗ್ರಹಕ್ಕೆ ವಿಶ್ವಸಮುದಾಯವನ್ನು ಒಳಗೊಂಡ ಬಹುವಿಧ ವ್ಯೂಹ ರಚನೆ ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ...

ಉಗ್ರ ನಿಗ್ರಹಕ್ಕೆ ಬಹುವಿಧ ವ್ಯೂಹ ರಚನೆ ಅತ್ಯಗತ್ಯ: ಪ್ರಧಾನಿ ಮೋದಿ
ಪೂರ್ವ ಏಷ್ಯಾ ಶೃಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
Published On :

ಕೌಲಾಲಂಪುರ: ಇಡೀ ವಿಶ್ವವನ್ನು ಪೀಡಿಸುತ್ತಿರುವ ಭಯೋತ್ಪಾದನೆ ಮತ್ತು ಉಗ್ರರ ನಿಗ್ರಹಕ್ಕೆ ವಿಶ್ವ ಸಮುದಾಯವನ್ನು ಒಳಗೊಂಡ ಬಹುವಿಧ ವ್ಯೂಹ ರಚನೆ ಅತ್ಯಗತ್ಯ ಎಂದು ಪ್ರಧಾನಿ  ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಮಲೇಷ್ಯಾ ರಾಜಧಾನಿ ಕೌಲಾಲಂಪುರದಲ್ಲಿ ನಡೆಯುತ್ತಿರುವ ಪೂರ್ವ ಏಷ್ಯಾ ಶೃಂಗ ಸಭೆಯನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದನೆ ಈಗ ಕೇವಲ  ಸೀಮಿತ ಪ್ರದೇಶದ ಸಮಸ್ಯೆಯಾಗಿ ಉಳಿದಿಲ್ಲ. ಅದರ ಕರಿ ನೆರಳು ಈಗ ವಿಶ್ವವ್ಯಾಪಿಯಾಗಿದೆ. ಅಂತಾರಾಷ್ಟ್ರೀಯ ಭಯೋತ್ಪಾದನೆ ನಿಗ್ರಹಕ್ಕೆ ಬಹುವಿಧ ವ್ಯೂಹ ರಚಿಸಬೇಕು ಎಂದು ಅವರು ಕರೆ  ನೀಡಿದರು.

ಪ್ಯಾರಿಸ್, ಅಂಕಾರಾ, ಮಾಲಿ, ಬೈರುತ್ ಮತ್ತು ರಷ್ಯಾ ವಿಮಾನದ ಮೇಲಿನ ದಾಳಿಗಳು ಭಯೋತ್ಪಾದಕ ಗುಂಪುಗಳು ಇದೀಗ ವಿಶ್ವವ್ಯಾಪಿಯಾಗಿವೆ ಎಂಬುದನ್ನು ಸಾಬೀತು ಪಡಿಸಿವೆ. ಸದಸ್ಯರ  ನೇಮಕಾತಿ, ದಾಳಿಗೆ ಗುರಿಗಳ ಆಯ್ಕೆ ಈ ಎಲ್ಲಾ ವಿಚಾರಗಳಲ್ಲೂ ಭಯೋತ್ಪಾದಕ ಗುಂಪುಗಳು ಈಗ ಜಾಗತಿಕ ಮಟ್ಟದಲ್ಲಿ ಬೆಳೆದಿವೆ.

ಭಯೋತ್ಪಾದಕರ ಆಶ್ರಯ ತಾಣಗಳ ಧ್ವಂಸ ಮತ್ತು  ಯುವಕರನ್ನು ಭಯೋತ್ಪಾದನೆಯತ್ತ ಸೆಳೆಯಲು ಅವರಿಗೆ ಸಮಾಜದೊಳಗಿಂದಲೇ ಲಭಿಸುತ್ತಿರುವ ನೆರವನ್ನು ಮೊದಲು ಕಡಿತಗೊಳಿಸಬೇಕು. ಉಗ್ರರಿಗೆ ಧಾರಾಕಾರವಾಗಿ ಬರುತ್ತಿರುವ ನಿಧಿಯನ್ನು ನಿಲ್ಲಿಸುವ ಮೂಲಕ ಉಗ್ರ ಸಂಘಟನೆಗಳ ಆರ್ಥಿಕ ದಾರಿಯನ್ನು ಮುಚ್ಚುವತ್ತ ಗಮನ ಹರಿಸಬೇಕು ಎಂದು ಮೋದಿ ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.