ಪ್ರಧಾನ ಸುದ್ದಿ

ರಾಹುಲ್ ಭೇಟಿ ಮಾಡಿದ ಜೇಟ್ಲಿ

ಜಿಎಸ್‍ಟಿ ಜಾರಿಗೆ ಸಾಹಸ ಮಾಡುತ್ತಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಬುಧವಾರ ರಾಹುಲ್‍ಗಾಂಧಿ ಅವರನ್ನು...

ರಾಹುಲ್ ಭೇಟಿ ಮಾಡಿದ ಜೇಟ್ಲಿ
ಅರುಣ್ ಜೇಟ್ಲಿ-ರಾಹುಲ್ ಗಾಂಧಿ
Published On :
ನವದೆಹಲಿ: ಜಿಎಸ್‍ಟಿ ಜಾರಿಗೆ ಸಾಹಸ ಮಾಡುತ್ತಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಬುಧವಾರ ರಾಹುಲ್‍ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. 
ಭೇಟಿ ಉದ್ದೇಶ ತಮ್ಮ ಪುತ್ರಿ ವಿವಾಹಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸುವುದಾಗಿದ್ದರೂ, ಆರ್ಥಿಕ ಸುಧಾರಣೆಗಳ ಪ್ರಮುಖ ಘಟ್ಟವಾದ ಸರಕು ಸೇವೆ ತೆರಿಗೆ ಜಾರಿಗೆ ನೆರವಾಗುವಂತೆ ಕೋರಿದ್ದಾರೆಂಬ ವದಂತಿ ರಾಜಧಾನಿಯಲ್ಲಿ ಹರಡಿವೆ. 
ಸಂಸತ್ತಿನ ಚಳಿಗಾಲದ ಅಧಿವೇಶನ ಮುಂದಿನ ವಾರ ಪ್ರಾರಂಭವಾಗುತ್ತಿದ್ದು, ಜಿಎಸ್‍ಟಿ ಜಾರಿಗೆ ತರಲಾಗಿರುವ ಉದ್ದೇಶಿತ 122 ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆ ಸುಗಮವಾಗಬೇಕಿದೆ. ಈ ಅಧಿವೇಶನದಲ್ಲಿ ಅನುಮೋದನೆ ಸಿಕ್ಕರೆ ಮಾತ್ರ ಮುಂದಿನ ಏಪ್ರಿಲ್‍ನಿಂದ ಜಾರಿ ಆಗಲಿದೆ.
ಬಹುತೇಕ ಪ್ರತಿಪಕ್ಷಗಳು ಜಿಎಸ್‍ಟಿಗೆ ಒಪ್ಪಿಗೆ ಸೂಚಿಸಿವೆ. ಆದರೆ, ಕಾಂಗ್ರೆಸ್ ಮಾತ್ರ ತನ್ನ ವಿರೋಧ ಕೈಬಿಟ್ಟಿಲ್ಲ. ಹೀಗಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಹಾಗೂ ರಾಹುಲ್ ಗಾಂಧಿ ಅವರ ಭೇಟಿಗೆ ಮಹತ್ವ ಬಂದಿದೆ. ಆದರೆ, ಕಾಂಗ್ರೆಸ್ ಹಾಗೂ ಬಿಜೆಪಿಯ ವಕ್ತಾರರೂ ಭೇಟಿ ವೇಳೆ ಜಿಎಸ್‍ಟಿ ಬಗ್ಗೆ ಚರ್ಚೆ ನಡೆಸಿರುವುದನ್ನು ನಿರಾಕರಿಸಿವೆ. 
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಸರ್ಕಾರಕ್ಕೆ ಜಿಎಸ್‍ಜಿ ಬಗ್ಗೆ ಚರ್ಚಿಸಲು, ಅನುಮೋದನೆ ಪಡೆಯಲು ಉತ್ಸಾಹ ಇದ್ದರೆ ಈ ಬಗ್ಗೆ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭಾ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಅವರೊಂದಿಗೆ ಸಮಾಲೋಚನೆ ನಡೆಸಲಿ ಎಂದಿದ್ದಾರೆ. 
25ರಂದು ಸರ್ವಪಕ್ಷಗಳ ಸಭೆ ನಡೆಯಲಿದ್ದು, ಅಲ್ಲಿ ಒಮ್ಮತ ಮೂಡಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಲಿದೆ. ಬಿಹಾರ ವಿಧಾನಸಭಾ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿ, ಪ್ರತಿಪಕ್ಷಗಳು, ಮುಖ್ಯವಾಗಿ ಕಾಂಗ್ರೆಸ್ ತಕರಾರು ಎತ್ತಿರುವ ಶೇ.1 ರಷ್ಟು ತೆರಿಗೆ ಹೇರುವ ಅಧಿಕಾರವನ್ನು ರಾಜ್ಯಗಳಿಗೆ ನೀಡುವ ಅಂಶವನ್ನು ಮಾರ್ಪಡಿಸಲು ಸಿದ್ದವಾಗಿದೆ. 
ಜಿಎಸ್ ಟಿ ಜಾರಿಯಾದರೆ ಮಾತ್ರ ಮಾತ್ರ ಎನ್‍ಡಿಎ ಸರ್ಕಾರದ ಉದ್ದೇಶಿತ ಆರ್ಥಿಕ ಸುಧಾರಣೆಗಳು ಅನುಷ್ಠಾನಕ್ಕೆ ಬರಲು ಸಾಧ್ಯ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.