ಕ್ರಿಕೆಟಿಗ ಅಮಿತ್ ಮಿಶ್ರಾ ಜತೆ ಸಂಬಂಧ ಇತ್ತು: ವಂದನಾ ಜೈನ್
ಕ್ರಿಕೆಟಿಗ ಅಮಿತ್ ಮಿಶ್ರಾ ಜೊತೆ ಕಳೆದ ಮೂರು ವರ್ಷಗಳಿಂದ ತಾನು ಸಂಬಂಧ ಹೊಂದಿರುವುದಾಗಿ, ಸ್ಪಿನ್ನರ್ ವಿರುದ್ಧ...

ಬೆಂಗಳೂರು: ಕ್ರಿಕೆಟಿಗ ಅಮಿತ್ ಮಿಶ್ರಾ ಜೊತೆ ಕಳೆದ ಮೂರು ವರ್ಷಗಳಿಂದ ತಾನು ಸಂಬಂಧ ಹೊಂದಿರುವುದಾಗಿ, ಸ್ಪಿನ್ನರ್ ವಿರುದ್ಧ ಹಲ್ಲೆ ಹಾಗೂ ನಿಂದನೆ ಪ್ರಕರಣ ದಾಖಲಿಸಿರುವ ವಂದನಾ ಜೈನ್ ಅವರು ಸೋಮವಾರ ಹೇಳಿದ್ದಾರೆ.
ಅಮಿತ್ ಮಿಶ್ರಾ ತಮ್ಮೊಂದಿಗೆ ಸಂಬಂಧ ಹೊಂದಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಇಬ್ಬರೂ ಒಟ್ಟಿಗೆ ಇರುವ ಕೆಲವು ಚಿತ್ರಗಳನ್ನು ಸಹ ವಂದನಾ ನೀಡಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ ಅಶೋಕನಗರ ಪೊಲೀಸರು ಅಮಿತ್ ಮಿಶ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
'ಜನ ಸತ್ಯವನ್ನು ತಿಳಿಯದೇ ಮಾತನಾಡುತ್ತಾರೆ. ನಾನು ಹಣಕ್ಕಾಗಿ ಈ ರೀತಿ ಹೇಳುತ್ತಿದ್ದೇನೆ ಎಂದುಕೊಳ್ಳಬಾರದು ಎಂಬ ಕಾರಣಕ್ಕೆ ನಾನು ಈ ಚಿತ್ರಗಳನ್ನು ತೋರಿಸುತ್ತಿದ್ದೇನೆ. ನಾನು ಆತನೊಂದಿಗೆ ಸಂಬಂಧ ಹೊಂದಿದ್ದೆ ಮತ್ತು ಕೊನೆಯವರೆಗೂ ಜೊತೆಯಲ್ಲಿರಲು ಬದ್ಧನಾಗಿದ್ದೆ. ಆದರೆ ಆತ ನನಗೆ ದ್ರೋಹ ಮಾಡಿದ್ದಾನೆ' ಎಂದು ವಂದನಾ ಇಂಡಿಯನ್ ಎಕ್ಸ್‌ಪ್ರೆಸ್ ತಿಳಿಸಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ಕೇಳಲು ಇಂಡಿಯನ್ ಎಕ್ಸ್‌ಪ್ರೆಸ್ ಅಮಿತ್ ಮಿಶ್ರಾ ಅವರನ್ನು ಸಂಪರ್ಕಿಸಿದಾಗ, 'ಅವಳು ಹೇಳುತ್ತಿರುವುದು ಸುಳ್ಳು. ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದಾಳೆ. ಆ ಬಗ್ಗೆ ಚರ್ಚಿಸಲು ನನಗೆ ಇಷ್ಟವಿಲ್ಲ' ಎಂದಿದ್ದಾರೆ.
ನಾನು ಅಮಿತ್ ಮಿಶ್ರಾ ಗರ್ಲ್‌ಫ್ರೆಂಡ್ ಎಂಬುದು ಹೋಟೆಲ್ ಸಿಬ್ಬಂದಿಗೆ ಗೊತ್ತಿತ್ತು. ಹೀಗಾಗಿಯೇ ಅವರು ನನಗೆ ಅಮಿತ್ ರೂಮ್ ಕೀ ನೀಡಿದ್ದು. ಇಲ್ಲಿ ನಿಜವಾಗಿಯೂ ಮೋಸ ಹೋಗಿರುವುದು ನಾನು. ಅಮಿತ್ ಅಲ್ಲ. ಆತ ನನ್ನ ಭಾವನೆಗಳೊಂದಿಗೆ ಆಟವಾಡಿದ್ದಾನೆ ಎಂದು ವಂದನಾ ಆರೋಪಿಸಿದ್ದಾರೆ.
ನಾನು ಅಮಿತ್ ಗರ್ಲ್‌ಫ್ರೆಂಡ್ ಆಗಿ ಆತನ ರೂಮ್‌ಗೆ ಹೋಗುವ ಹಕ್ಕು ಇದೆ. ಆದರೆ ನನ್ನ ಮೇಲೆ ಹಲ್ಲೆ ನಡೆಸುವ ಹಕ್ಕು ಆತನಿಗಿಲ್ಲ ಎಂದು ವಂದನಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


