ಪ್ರಧಾನ ಸುದ್ದಿ

ಮಂಗಳೂರು ಜೈಲಿನಲ್ಲಿ ಜೋಡಿ ಕೊಲೆ ಪ್ರಕರಣ: ಜೈಲು ಅಧೀಕ್ಷಕ ಸೇರಿ ನಾಲ್ವರ ಅಮಾನತು

ಕಳೆದ ವಾರ ಮಂಗಳೂರಿನ ಸಬ್‌ಜೈಲಿನಲ್ಲಿ ನಡೆದ ಜೋಡಿ ಕೊಲೆ ಪ್ರಕರಣ ಸಂಬಂಧ ಜೈಲಿನ ಅಧೀಕ್ಷಕ ಓಬಳೇಶ್ವರ ಸೇರಿದಂತೆ ನಾಲ್ವರನ್ನು...

ಮಂಗಳೂರು ಜೈಲಿನಲ್ಲಿ ಜೋಡಿ ಕೊಲೆ ಪ್ರಕರಣ: ಜೈಲು ಅಧೀಕ್ಷಕ ಸೇರಿ ನಾಲ್ವರ ಅಮಾನತು
ಮೃತ ಮಾಡೂರು ಯೂಸಫ್
Published On :

ಮಂಗಳೂರು: ಕಳೆದ ವಾರ ಮಂಗಳೂರಿನ ಸಬ್‌ಜೈಲಿನಲ್ಲಿ ನಡೆದ ಜೋಡಿ ಕೊಲೆ ಪ್ರಕರಣ ಸಂಬಂಧ ಜೈಲಿನ ಅಧೀಕ್ಷಕ ಓಬಳೇಶ್ವರ ಸೇರಿದಂತೆ ನಾಲ್ವರನ್ನು ಅಮಾನತು ಮಾಡಲಾಗಿದೆ.

ಕರ್ತವ್ಯಲೋಪ ಹಿನ್ನೆಲೆಯಲ್ಲಿ ಜೈಲು ಅಧೀಕ್ಷಕ ಸೇರಿದಂತೆ ನಾಲ್ವರನ್ನು ಅಮಾನತು ಮಾಡುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎಸ್.ಮುರಗನ್ ಅವರು ಶಿಫಾರಸು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬಂದೀಖಾನೆ ಇಲಾಖೆ ಎಡಿಜಿಪಿ ಕಮಲ್ ಪಂತ್ ನಾಲ್ವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕಳೆದ ನವೆಂಬರ್ 2ರಂದು ಭೂಗತ ಪಾತಕಿ ದಾವೂದ್ ಸಹಚರ ಮಾಡೂರು ಯೂಸಫ್(42) ಹಾಗೂ ಛೋಟಾ ಶಕೀಲ್ ಸಹಚರ ಗಣೇಶ್ ಶೆಟ್ಟಿ ಎಂಬ ವಿಚಾರಣಾಧೀನ ಕೈದಿಗಳನ್ನು ಕೊಲೆ ಮಡಲಾಗಿತ್ತು.

ಕೈದಿಗಳ ಹತ್ಯೆಯ ನಂತರ ಪರಿಶೀಲನೇ ನಡೆಸಿದಾಗ 17 ಮೊಬೈಲ್ ಹಾಗೂ ಮಾರಾಕಾಸ್ತ್ರಗಳು ಪತ್ಯೆಯಾಗಿದ್ದವು.

ಹಲವು ಕೊಲೆ ಪ್ರಕರಣಗಳಲ್ಲಿ ವಿಚಾರಣಾಧೀಕ ಕೈದಿಯಾಗಿದ್ದ ಭೂಗತ ಪಾತಕಿ ವಿಕ್ಕಿಶೆಟ್ಟಿ ಸಹಚರ ಆಕಾಶಭವನ್ ಶರಣ್ ತಂಡದ ಕೈದಿಗಳ ಗುಂಪು ಈ ಜೋಡಿ ಕೊಲೆ ಮಾಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.