ಚೈನಾ ಅಧ್ಯಕ್ಷನಿಗೆ ಮೀಸೆ; ಕಲಾವಿದನ ಬಂಧನ
ಚೈನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರಿಗೆ ಮೀಸೆ ಬರೆದು ಹಾಸ್ಯ ಚಿತ್ರವೊಂದನ್ನು ಪ್ರಕಟಿಸಿದ್ದಕ್ಕೆ ಶಾಂಘೈ ಕಲಾವಿದ ಡೈ ಜೈನ್ಯಾಂಗ್ ಅವರನ್ನು ಬಂಧಿಸಲಾಗಿದೆ

ಶಾಂಘೈ: ಚೈನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರಿಗೆ ಮೀಸೆ ಬರೆದು ಹಾಸ್ಯ ಚಿತ್ರವೊಂದನ್ನು ಪ್ರಕಟಿಸಿದ್ದಕ್ಕೆ ಶಾಂಘೈ ಕಲಾವಿದ ಡೈ ಜೈನ್ಯಾಂಗ್ ಅವರನ್ನು ಬಂಧಿಸಲಾಗಿದೆ ಎಂದು ಚೈನಾ ಮಾನವ ಹಕ್ಕುಗಳ ಸಮರ್ಥನಾ ಸಂಸ್ಥೆ ತಿಳಿಸಿದೆ.
ಛಾಯಾಚಿತ್ರಕಾರ ಡೈ ಅವರು 'ಕೈಸಾಂಥೇನಿಯಮ್ ಮುಖ'ಗಳನ್ನು ಸೃಷ್ಟಿಸುವಲ್ಲಿ ಪ್ರವೀಣರು. ಈ ಹೂವು ಚೈನಾದ ಆಡು ಭಾಷೆಯಲ್ಲಿ ಗುದವನ್ನು ಪ್ರತಿನಿಧಿಸುತ್ತದೆ.
ಕ್ಸಿ ಅವರ ಚಿತ್ರ ಬಳಸಿ ಅಂತರ್ಜಾಲದಲ್ಲಿ ಸ್ಯೂಟ್ ಕೇಸ್, ಟಿ ಶರ್ಟ್ ಮತ್ತು ಕೋಕ್ ಡಬ್ಬಗಳ ಮೇಲೆ 'ಕೈಸಾಂಥೇನಿಯಮ್ ಮುಖ' ಮೂಡಿಸಿ ಹಾಗು ವಿಚಿತ್ರ ಮೀಸೆ ಬರೆದು ಪ್ರಕಟಿಸಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಕ್ಸಿ ಫೋಟೋದ ಮೇಲೆ ಮೂಡಿಸಿದ ಮೀಸೆ ಹಿಟ್ಲರ್ ಮೀಸೆಗೆ ಹೋಲಿಕೆಯಾಗದಿದ್ದರೂ ಹಲವು ಅಂತರ್ಜಾಲ ಬಳಕೆದಾರರು ಅದು ಹಿಟ್ಲರ್ ನನ್ನು ನೆನಪಿಸುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದುಬಂದಿದೆ.
ದಾಂಧಲೆ ಸೃಷ್ಟಿಸಿರುವ ಆರೋಪದ ಮೇಲೆ ಡೈ ಅವರನ್ನು ಬಂಧಿಸಿದ್ದು ಆರೋಪ ಸಾಬೀತಾದರೆ ೫ ವರ್ಷಗಳ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


