ಬಿಸಿಲಿನ ಝಳಕ್ಕೆ ಬಸವಳಿದ ಭಾರತ: 1118 ಜನ ಸಾವು
ದೇಶಾದ್ಯಂತ ಬಿಸಿಲಿನ ಝಳಕ್ಕೆ ಅಸುನೀಗಿದವರ ಸಂಖ್ಯೆ 1,118 ಕ್ಕೆ ಏರಿಕೆಯಾಗಿದೆ. ಸೋಮವಾರದಿಂದ ಈಚೆಗೆ ಆಂಧ್ರಪ್ರದೇಶ, ತೆಲಂಗಾಣ...

ನವದೆಹಲಿ: ದೇಶಾದ್ಯಂತ ಬಿಸಿಲಿನ ಝಳಕ್ಕೆ ಅಸುನೀಗಿದವರ ಸಂಖ್ಯೆ 1,118 ಕ್ಕೆ ಏರಿಕೆಯಾಗಿದೆ. ಸೋಮವಾರದಿಂದ ಈಚೆಗೆ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ 207 ಮಂದಿ ಅಸುನೀಗಿದ್ದಾರೆ.
ಗುಜರಾತ್‍ನಲ್ಲಿ 7 ಮಂದಿ ಸಾವಿಗೀಡಾಗಿದ್ದಾರೆ. ದೆಹಲಿ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ, ಪಂಜಾಬ್, ಹರ್ಯಾಣ, ಮಧ್ಯಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಬಿಸಿಲಿನ ಝಳ ತೀವ್ರವಾಗಿಯೇ ಇದೆ.
ಈ ರಾಜ್ಯಗಳ ಹೆಚ್ಚಿನ ಪ್ರದೇಶಗಳಲ್ಲಿ ಮಂಗಳವಾರ ತಾಪಮಾನ 45 ಡಿಗ್ರಿ ಸೆಲ್ಷಿಯಸ್‍ಗಿಂತ ಕಡಿಮೆ ಇರಲೇ ಇಲ್ಲ. ಆಂಧ್ರಪ್ರದೇಶದಲ್ಲಿ ಹೆಚ್ಚು: ಆಂಧ್ರಪ್ರದೇಶದಲ್ಲಿ ಬಿಸಿಲಿನ ಝಳದಿಂದಾಗಿ 852 ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಪೈಕಿ ಗುಂಟೂರು ಜಿಲ್ಲೆಯೊಂದರಲ್ಲೇ 130 ಮಂದಿ ಸತ್ತಿದ್ದಾರೆ. ಪೂರ್ವ ಗೋದಾವರಿಯಲ್ಲಿ 90, ವಿಜಯನಗರಂನಲ್ಲಿ 78, ವಿಶಾಖಪಟ್ಟಣದಲ್ಲಿ 112 ಹಾಗೂ ಪ್ರಕಾಶಂ ಜಿಲ್ಲೆಯಲ್ಲಿ 57 ಮಂದಿ ನೆಯುಸಿರೆಳೆದಿದ್ದಾರೆ. ತೆಲಂಗಾಣದಲ್ಲಿ ಒಟ್ಟು 266 ಮಂದಿ ಅಸುನೀಗಿದ್ದಾರೆ.
ತಾಪಮಾನ: ಎಲ್ಲೆಲ್ಲಿ ಎಷ್ಟು?
(ಸೆಲ್ಷಿಯಸ್‍ಗಳಲ್ಲಿ)
- ರಾಜಸ್ಥಾನ ಅತ್ಯಧಿಕ: ಕೋಟದಲ್ಲಿ
ರಾಜಸ್ಥಾನ 45.8 , ಜೈಪುರ :44.7,
ಜೈಸಲ್ಮರ್ 44.2, ಜೋಧಪುರ 43.2
- ಉತ್ತರ ಪ್ರದೇಶ : ಅಲಹಾಬಾದ್ 46.4
- ಹರಿಯಾಣ ಮತ್ತು ಪಂಜಾಬ್: 41 ರಿಂದ 45
ಸ್ವರ್ಗ ಸದೃಶ ಕಾಶ್ಮೀರ : ಮಿಕ್ಕೆಲ್ಲ ರಾಜ್ಯಗಳು ಧಗೆಯಿಂದ ಬೇಯುತ್ತಿದ್ದರೆ ಕಾಶ್ಮೀರದಲ್ಲಿ ಮಾತ್ರ 22 ಡಿಗ್ರೀ ಸೆಲ್ಷಿಯಸ್ ತಾಪಮಾನ ವರದಿಯಾಗಿದ್ದು, ಜನತೆ ಅತ್ಯಂತ ಆಹ್ಲಾದಮಯ ಹವಾಮಾನವನ್ನು ಸವಿಯುತ್ತಿದೆ. ರೆಡ್ ಬಾಕ್ಸ್ ಎಚ್ಚರಿಕೆ : ಹವಾಮಾನ ಇಲಾಖೆ ಒರಿಸ್ಸಾ, ಜಾರ್ಖಂಡ್ ಹಾಗೂ ಆಂಧ್ರಪ್ರದೇಶ ಕರಾವಳಿ ರಾಜ್ಯಗಳಿಗೆ ಮುಂದಿನ ಎರಡು ದಿನಗಳ ಮಟ್ಟಿಗೆ ರೆಡ್ ಬಾಕ್ಸ್ ಎಚ್ಚರಿಕೆ ನೀಡಿದೆ. ರೆಡ್ ಬಾಕ್ಸ್ ಎಚ್ಚರಿಕೆಯ ಪರಿಸ್ಥಿತಿಯಲ್ಲಿ ಬಿಸಿಲಿನ ಝಳ 45 ಡಿಗ್ರಿ ಸೆಲ್ಷಿಯಸ್ ಗಿಂತ ತೀವ್ರವಾಗಿ ಜನ ಬಿಸಿನ ಝಳಕ್ಕೆ ಸಿಕ್ಕಿ ಸಾವಿಗೀಡಾಗುವ ಸಂಭವವಿದ್ದು, ದೇಹದಲ್ಲಿ ನೀರಿನ ಅಂಶ ಬತ್ತಿ ಹೋಗುವುದು ಹಾಗೂ ಸಾವಿನ ಸಾಧ್ಯತೆಗಳು ಹೆಚ್ಚು.
ಈ ಬಾರಿ ಯಾಕೆ ಹೀಗೆ?
- ಈ ಬಾರಿಯ ಮುಂಗಾರು ಪೂರ್ವ ಮಳೆ ಬೇಗನೆ ಬಂದು ನಿಂತು ಹೋಯಿತು.
-ಅರಬಿ ಸಮುದ್ರದಲ್ಲಿ ಎದ್ದಿದ್ದ ಸೈಕ್ಲೋನ್ ವಾತಾವರಣ ಕೂಡಲೇ ಕಾವು ಕಳೆದುಕೊಂಡಿತು.
-ಬಂಗಾಳ ಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದಿಂದಾಗಿ ಈ ಬಾರಿ ಪೂರ್ವ ಕರಾವಳಿಯಲ್ಲಿ ಮಳೆಯಾಗಿಲ್ಲ. ಅದರ ಪ್ರಭಾವದಿಂದಾಗಿ ಈಶಾನ್ಯ ರಾಜ್ಯಗಳಲ್ಲಿ ಮಳೆಯಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


