ಪ್ರಧಾನ ಸುದ್ದಿ

ಮೋದಿ ಒಂದು ವರ್ಷದ ಆಡಳಿತ: ಮಹಾರಾಷ್ಟ್ರದಲ್ಲಿ ೧೩೦೬ ರೈತರ ಆತ್ಮಹತ್ಯೆ

ಪ್ರಧಾನಿ ನರೇಂದ್ರ ಮೋದಿ ಅವರ ಒಂದು ವರ್ಷದ ಆಡಳಿತದಲ್ಲಿ ಅಂದರೆ ಮೇ ೨೦ ೨೦೧೪ ಮತ್ತು ಮೇ ೨೫ ೨೦೧೫ ರ ನಡುವೆ ಮಹಾರಾಷ್ಟ್ರದಲ್ಲಿ ದಾಖಲೆ ಸಂಖ್ಯೆಯಲ್ಲಿ

ಮೋದಿ ಒಂದು ವರ್ಷದ ಆಡಳಿತ: ಮಹಾರಾಷ್ಟ್ರದಲ್ಲಿ ೧೩೦೬ ರೈತರ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
Published On :

ನಾಗಪುರ: ಪ್ರಧಾನಿ ನರೇಂದ್ರ ಮೋದಿ ಅವರ ಒಂದು ವರ್ಷದ ಆಡಳಿತದಲ್ಲಿ ಅಂದರೆ ಮೇ ೨೦ ೨೦೧೪ ಮತ್ತು ಮೇ ೨೫ ೨೦೧೫ ರ ನಡುವೆ ಮಹಾರಾಷ್ಟ್ರದಲ್ಲಿ ದಾಖಲೆ ಸಂಖ್ಯೆಯಲ್ಲಿ ರೈತರ ಆತ್ಮಹತ್ಯೆ ಸಂಭವಿಸಿದೆ ಎಂದು ರೈತರ ಕಾವಲು ಸಮಿತಿ ಸೋಮವಾರ ಹೇಳಿದೆ. ಈ ಸಂಖ್ಯೆ ೧೩೦೬.

ಇದು ಕಳೆದ ವರ್ಷಕ್ಕೆ (ಮೇ ೨೦೧೩ ರಿಂದ ಮೇ ೨೦೧೪) ಹೋಲಿಸಿದರೆ ೪೦% ಹೆಚ್ಚಳವಾಗಿದೆ ಎಂದು ವಿದರ್ಭ ಜನ ಆಂದೋಲನ ಸಮಿತಿ ಅಧ್ಯಕ್ಷ ಕಿರ್ಶೋರ್ ತಿವಾರಿ ಹೇಳಿದ್ದಾರೆ.

ಮೋದಿ ಅವರ ಒಂದು ವರ್ಷದ ಆಡಳಿತದ ಬಗ್ಗೆ ಹಲವಾರು ಅಭಿಪ್ರಾಯಗಳಿದ್ದು ಅವುಗಳಲ್ಲಿ ಬಹುಪಾಲು ಆಶಾವಾದವಿದ್ದರೂ ಮಹಾರಾಷ್ಟ್ರ ರೈತರಿಗೆ ಅದರಲ್ಲೂ ವಿದರ್ಭದ ರೈತರಿಗೆ ಇದು ನಿಜವೆಂದೆನಿಸಿಲ್ಲ. ಕಳೆದ ೧೦ ವರ್ಷಗಳಿಂದ ರೈತರ ಸಾವಿಗೆ ವಿದರ್ಭ ಕೇಂದ್ರವಾಗಿ ಉಳಿದಿದೆ ಎಂದು ತಿವಾರಿ ತಿಳಿಸಿದ್ದಾರೆ.

"ಎನ್ ಡಿ ಎ -೨ ಅಧಿಕಾರಕ್ಕೆ ಬಂದಾಗಿನಿಂದ ರೈತರ ಅಧಿಕೃತ ಸಾವಿನ ಸಂಖ್ಯೆ ೧೩೦೬. ಅಲ್ಲದೆ ಇದು ದಿನೇ ದಿನ ಹೆಚ್ಚುತ್ತಿದ್ದೆ. ೨೦೧೫ ರ  ಮೊದಲ ೧೪೦ ದಿನಗಳಲ್ಲಿ ೪೪೮ ಆತ್ಮಹತ್ಯೆಗಳಾಗಿವೆ. ಇದು ರಾಜ್ಯದಲ್ಲಿ ೫ ದಶಲಕ್ಷ ರೈತರ ಶೋಚನೀಯ ಸ್ಥಿತಿಯನ್ನು ತಿಳಿಸುತ್ತದೆ" ಎಂದು ತಿವಾರಿ ತಿಳಿಸಿದ್ದಾರೆ.

"ಈಗಾಗಲೇ ಒಂದು ವರ್ಷ ಕಳೆದಿದ್ದರೂ ಎನ್ ಡಿ ಎ -೨ ರೈತರಿಗೆ ತಾನು ನೀಡಿದ್ದ ಭರವಸೆಗಳನ್ನು ಮರೆತಿದೆ. ಹಳೆ ಸಾಲಗಳ ಮನ್ನಾ ಆಗಲಿ ಹೊಸ ಸಾಲ ನೀಡುವುದಾಗಲಿ ಯಾವ ಕಾರ್ಯಕ್ರಮವೂ ಜಾರಿಯಾಗಲಿಲ್ಲ" ಎಂದು ತಿವಾರಿ ಟೀಕಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.