ಪ್ರಧಾನ ಸುದ್ದಿ

ರೈತರ ದೂರದರ್ಶನ ವಾಹಿನಿ 'ಡಿಡಿ ಕಿಸಾನ್' ಮಂಗಳವಾರ ಅನಾವರಣ

ರೈತ ಕೇಂದ್ರಿತ ದೂರದರ್ಶನ ಟಿವಿ ವಾಹಿನಿಯನ್ನು ಪ್ರಧಾನಿ ನರೇಂದ್ರ ಮೋದಿ ನಾಳೆ ಅನಾವರಣಗೊಳಿಸಲಿದ್ದಾರೆ.

ರೈತರ ದೂರದರ್ಶನ ವಾಹಿನಿ 'ಡಿಡಿ ಕಿಸಾನ್' ಮಂಗಳವಾರ ಅನಾವರಣ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ರೈತ ಕೇಂದ್ರಿತ ದೂರದರ್ಶನ ಟಿವಿ ವಾಹಿನಿಯನ್ನು ಪ್ರಧಾನಿ ನರೇಂದ್ರ ಮೋದಿ ನಾಳೆ ಅನಾವರಣಗೊಳಿಸಲಿದ್ದಾರೆ.

ಕೇಬಲ್ ಮತ್ತು ಡಿಟಿಎಚ್ ನಿರ್ವಾಹಕರು ತಮ್ಮ ಗ್ರಾಹಕರಿಗೆ ಈ ವಾಹಿನಿಯನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕು ಎಂದು ಸರ್ಕಾರ ನಿಯಮ ಮಾಡಿದೆ.

"ಎಲ್ಲ ರಾಜ್ಯಗಳಲ್ಲೂ ರೈತರು ಇರುವುದರಿಂದ ಕೇಬಲ್ ಕಾಯ್ದೆಯ ಪ್ರಕಾರ ಕಿಸಾನ್ ವಾಹಿನಿಯನ್ನು ಕಡ್ಡಾಯ ಮಾಡಲಾಗಿದೆ. ಇದನ್ನು ಕೇಬಲ್ ಮತ್ತು ಡಿಟಿಎಚ್ ನಿರ್ವಾಹಕರು ತಮ್ಮ ಗ್ರಾಹಕರಿಗೆ ಈ ವಾಹಿನಿಯನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕು" ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅರುಣ್ ಜೇಟ್ಲಿ ಇಂದು ತಿಳಿಸಿದ್ದಾರೆ.

ಈ ಹಿಂದೆ ೨೪ ಕಡ್ಡಾಯ ಪ್ರಸಾರ ವಾಹಿನಿಗಳಿದ್ದವು, ಈಗ ಈ ಹೊಸ ಸೂಚನೆಯೊಂದಿಗೆ ಇದರ ಸಂಖ್ಯೆ ೨೫ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಾಹಿನಿ 24x7 ಲಭ್ಯವಾಗಲಿದ್ದು, ಪ್ರಧಾನವಾಗಿ ಕೃಷಿ, ಮತ್ತು ಗ್ರಾಮೀಣ ಭಾರತದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುವುದು. ಹಾಗು ಹವಾಮಾನ ವರದಿ ಅತಿ ಉಪಯುಕ್ತವಾಗಲಿದೆ ಎಂದು ಅರುಣ್ ಜೇಟ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.