ಪ್ರಧಾನ ಸುದ್ದಿ

ರಕ್ಷಣಾ ಸಚಿವ ಪರ್ರಿಕರ್ ಅವರ ಭಯೋತ್ಪಾದನೆ ಹೇಳಿಕೆಯನ್ನು ಖಂಡಿಸಿದ ಪಾಕಿಸ್ತಾನ

ಇತರ ದೇಶಗಳ ಭಯೋತ್ಪಾದನೆಯನ್ನು ಹತ್ತಿಕ್ಕಲು ಭಾರತ ಭಯೋತ್ಪಾದನೆಯನ್ನೇ ಬಳಸಲಿದೆ ಎಂದಿದ್ದ ಭಾರತದ ರಕ್ಷಣಾ ಸಚಿವ ಮನೋಹರ್

ರಕ್ಷಣಾ ಸಚಿವ ಪರ್ರಿಕರ್ ಅವರ ಭಯೋತ್ಪಾದನೆ ಹೇಳಿಕೆಯನ್ನು ಖಂಡಿಸಿದ ಪಾಕಿಸ್ತಾನ
ಮನೋಹರ್ ಪರ್ರಿಕರ್
Published On :

ಇಸ್ಲಾಮಾಬಾದ್: ಇತರ ದೇಶಗಳ ಭಯೋತ್ಪಾದನೆಯನ್ನು ಹತ್ತಿಕ್ಕಲು ಭಾರತ ಭಯೋತ್ಪಾದನೆಯನ್ನೇ ಬಳಸಲಿದೆ ಎಂದಿದ್ದ ಭಾರತದ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಅವರ ಹೇಳಿಕೆಯನ್ನು ಪಾಕಿಸ್ತಾನ ಖಂಡಿಸಿದೆ.

ಭಾರತ ಭಯೋತ್ಪಾದಕರನ್ನು ಕೊನೆಗಾಣಿಸಲು ಭಯೋತ್ಪಾದಕರನ್ನೇ ಬಳಸಬೇಕು ಎಂದು ಪರ್ರಿಕರ್ ನುಡಿದಿದ್ದರು ಎಂದು ಭಾರತದ ಮಾಧ್ಯಮಗಳು ಗುರುವಾರ ವರದಿ ಮಾಡಿದ್ದವು.

ಆದರೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪರ್ರಿಕರ್ ಅವರು ಈ ಹೇಳಿಕೆಗಳನ್ನು ಮಾಡಿರುವುದನ್ನು ಅಲ್ಲಗೆಳೆದಿದ್ದರು.

ಭಾರತದ ರಕ್ಷಣಾ ಸಚಿವರ ಹೇಳಿಕೆಗೆ ಪಾಕಿಸ್ತಾನದ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸತ್ರಜ್ ಅಜೀಜ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ.

"ಭಾರತ ಭಯೋತ್ಪಾದನೆಯಲ್ಲಿ ತೊಡಗಿರುವುದಕ್ಕೆ, ಪಾಕಿಸ್ತಾನದ ಆತಂಕವನ್ನು ಈ ಹೇಳಿಕೆ ಧೃಢೀಕರಿಸುತ್ತದೆ. ಒಂದು ದೇಶದ ಭಯೋತ್ಪಾದನೆಯನ್ನು ಹತ್ತಿಕ್ಕಲು ಭಯೋತ್ಪಾದನೆಯನ್ನು ಬಳಸಬೇಕೆಂದು, ಚುನಾಯಿತ ಸರ್ಕಾರದ ಯಾವುದೇ ಒಬ್ಬ ಮಂತ್ರಿ ಹೇಳಿರುವುದು ಇದೇ ಮೊದಲ ಬಾರಿ" ಎಂದು ಆಜಿಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪಾಕಿಸ್ತಾನ ಪ್ರಾಮಾಣಿಕವಾಗಿ ನೆರೆಯ ರಾಷ್ಟ್ರದ ಜೊತೆ ಉತ್ತಮ ಬಾಂಧವ್ಯದ ನೀತಿಯನ್ನು ಅನುಸರಿಸುತ್ತದೆ ಎಂದು ಕೂಡ ಅವರು ಹೇಳಿದ್ದಾರೆ.

"ಭಯೋತ್ಪಾದನೆ ನಮ್ಮ ಸಾಮಾನ್ಯ ಶತ್ರು. ಇದನ್ನು ಸೋಲಿಸುವುದಕ್ಕೆ ಎರಡು ದೇಶಗಳು ಒಟ್ಟಿಗೆ ಕೆಲಸ ಮಾಡಬೇಕು. ಬೇರೆ ಯಾವುದೇ ದೇಶಕ್ಕಿಂತ ಪಾಕಿಸ್ತಾನ ಭಯೋತ್ಪಾದನೆಗೆ ಹೆಚ್ಚು ಬಳಲಿದೆ" ಎಂದು ಸತ್ರಜ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.