ಹಳಿ ತಪ್ಪಿದ ಗೌಹಾಟಿ-ಸಿಫಂಗ್ ಎಕ್ಸ್ಪ್ರೆಸ್ಸ್; ಚಾಲಕನಿಗೆ ಗಾಯ
ಅಸ್ಸಾಮಿನ ಕೋಕ್ರಾಝರ್ ಜಿಲ್ಲೆಯಲ್ಲಿ ಸಲಕಟಿ ಮತ್ತು ಬಸುಗಾಂವ್ ಮಾರ್ಗ ಮಧ್ಯೆ ಗೌಹಾಟಿ-ಸಿಫಂಗ್ ಎಕ್ಸ್ಪ್ರೆಸ್ಸ್ ಶನಿವಾರ ಹಳಿತಪ್ಪಿದ್ದು

ಕೋಕ್ರಾಝರ್: ಅಸ್ಸಾಮಿನ ಕೋಕ್ರಾಝರ್ ಜಿಲ್ಲೆಯಲ್ಲಿ ಸಲಕಟಿ ಮತ್ತು ಬಸುಗಾಂವ್ ಮಾರ್ಗ ಮಧ್ಯೆ ಗೌಹಾಟಿ-ಸಿಫಂಗ್ ಎಕ್ಸ್ಪ್ರೆಸ್ಸ್ ಶನಿವಾರ ಹಳಿತಪ್ಪಿದ್ದು ಕನಿಷ್ಠ ಇಬ್ಬರಿಗೆ ಗಾಯವಾಗಿದೆ.
ಈಶಾನ್ಯ ಸರಹದ್ದಿನ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಜಯಂತಶರ್ಮ ೫ ಪ್ರಯಾಣಿಕ ಭೋಗಿಗಳು ಹಳಿ ತಪ್ಪಿದ ವರದಿಯಾಗಿದೆ ಎಂದು ತಿಳಿಸಿದ್ದಾರೆ.
ಸಲಕಟಿ ಮತ್ತು ಬಸುಗಾಂವ್ ಮಾರ್ಗದಲ್ಲಿ ಸುಮಾರು ಬೆಳಗ್ಗೆ ೫:೧೫ಕ್ಕೆ ೫೫೭೫೩ ಯು ಪಿ ಸಿಫಂಗ್ ಪ್ರಯಾಣಿಕ ರೈಲು ಸೇತುವೆಯನ್ನು ದಾಟುವುದಕ್ಕೂ ಮುಂಚೆ ಹಳಿ ತಪ್ಪಿದೆ. ಪಶ್ಚಿಮ ಬಂಗಾಳದ ಅಲಿಪುರದೌರ್ ನಿಂದ ಗೌಹಾಟಿಗೆ ಬರುತ್ತಿದ್ದ ಎಲ್ಲ ಪ್ರಯಾಣಿಕರನ್ನು ವರ್ಗಾಯಿಸಲಾಗಿದೆ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ಜಯಂತಶರ್ಮ ತಿಳಿಸಿದ್ದಾರೆ.
ರೈಲು ಚಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು, ಸಣ್ಣ ಪುಟ್ಟ ಗಾಯಗಳಾದ ಪ್ರಯಾಣಿಕರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ವಕ್ತಾರ ತಿಳಿಸಿದ್ದಾರೆ. ಈ ಘಟನೆಯಿಂದ ಈ ಸಂಪರ್ಕ ಮಾರ್ಗವನ್ನು ಮುಚ್ಚಲಾಗಿದ್ದು, ಇತರ ರೈಲುಗಳು ತಡವಾಗಿ ಚಲಿಸಲಿವೆ ಎಂದು ಕೂಡ ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


