ಮುಖ್ಯಮಂತ್ರಿ ಹಾರದಲ್ಲಿ ಶೆಲ್, ಲೋಪ ಎಸಗಿದ ಸಿಬ್ಬಂದಿ ವಿರುದ್ಧ ಕ್ರಮ: ಹರಿಶೇಖರನ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾಕಿದ ಹಾರದಲ್ಲಿ ಎಲ್‌ಇಡಿ ಲೈಟ್ ಹಾಗೂ ಬ್ಯಾಟರಿ ಶೆಲ್‌ಗಳು ಪತ್ತೆಯಾಗಿದ್ದು, ಭದ್ರತಾ...

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾಕಿದ ಹಾರದಲ್ಲಿ ಎಲ್‌ಇಡಿ ಲೈಟ್ ಹಾಗೂ ಬ್ಯಾಟರಿ ಶೆಲ್‌ಗಳು ಪತ್ತೆಯಾಗಿದ್ದು, ಭದ್ರತಾ ಲೋಪ ಎಸಗಿರುವ ಸಿಬ್ಬಂದಿ ವಿರುದ್ಧ ಕ್ರನ ಕೈಗೊಳ್ಳುವುದಾಗಿ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ಅವರು ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂಗೆ ಬ್ಯಾಟರಿ ಶೆಲ್ ಇರುವ ಹಾರ ಹಾಕಿದ್ದ ದಿನ ಕರ್ತವ್ಯದಲ್ಲಿದ್ದ ಅಧಿಕಾರಿ, ಸಿಬ್ಬಂದಿ ಯಾರೆಂದು ಪರಿಶೀಲಿಸಲಾಗಿದೆ. ಕರ್ತವ್ಯದಲ್ಲಿದ್ದ ಅಧಿಕಾರಿಗಳಿಂದ ವರದಿ ತರಿಸಿಕೊಂಡು ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಆಗಿದ್ದೇನು?: ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಅವರು ಮಂಗಳವಾರ ವಿಧಾನಸೌಧದಲ್ಲಿದ್ದರು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಕಚೇರಿಯಿಂದ ಹೊರಬಂದಾಗ ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಅವರ ಬೆಂಬಲಿಗರು ಮುಖ್ಯಮಂತ್ರಿಗಾಗಿ ಕಾಯುತ್ತಿದ್ದರು. ಅವರು ಕಚೇರಿಯಿಂದ ಹೊರ ಬರುತ್ತಿದ್ದಂತೆ ಎಳ್‌ಇಡಿ ಲೈಟ್ ಇರುವ ಹಾರ ಹಾಕಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ಅವರಿಗೆ ಸೂಚಿಸಿದ್ದಾರೆ.
ಸಿಎಂಗೆ ಅಭಿಮಾನಿಗಳು ಉಡುಗೊರೆ ನೀಡುತ್ತಾರೆ. ಅವು ಮುಖ್ಯಮಂತ್ರಿಗೆ ತಲುಪುವ ಮುನ್ನ ಭದ್ರತಾ ಶಿಷ್ಟಾಚಾರವನ್ನು ಪೂರೈಸಬೇಕು ಎಂದು ನಿವೃತ್ತ ಐಜಿಪಿ ಗೋಪಾಲ್ ಹೊಸೂರು ಅವರು ಅಭಿಪ್ರಾಯಪಟ್ಟಿದ್ದಾರೆ.
ಯಾವ ಭಯ ಇಲ್ಲ: ಸಿಎಂ
ಮೈಸೂರು: ನಿನ್ನೆ ನನ್ನನ್ನು ಭೇಟಿ ಮಾಡಲು ಬಂದ ಪರಿಚಿತ ವ್ಯಕ್ತಿಯೊಬ್ಬರು ತಂದ ಹಾರದಲ್ಲಿ ಎಲ್‌ಇಡಿ ಬಲ್ಬ್ ಇತ್ತು. ಅವರು ಅಲಂಕಾರಕ್ಕೆ ಅಳವಡಿಸಿದ್ದರು. ಅವರು ನನಗೆ ಬೇಕಾದವರೆ. ಪೊಲೀಸರು ಆತಂಕಗೊಂಡಿದ್ದಷ್ಟೇ. ಅವರ ಕರ್ತವ್ಯ ಅವರು ಮಾಡುತ್ತಿದ್ದಾರೆ. ನಮಗೆ ಯಾವ ಭವೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


