ಪ್ರಧಾನ ಸುದ್ದಿ

ಬಾಲ ಕಾರ್ಮಿಕ ಕಾನೂನು ತಿದ್ದುಪಡಿಗೆ ಸರ್ಕಾರ ಒಪ್ಪಿಗೆ

೧೪ ವರ್ಷದ ಕೆಳಗಿನ ಮಕ್ಕಳು ಕೌಟುಂಬಿಕ ಉದ್ಯಮ ಅಥವಾ ಮನರಂಜನಾ ಉದ್ದಿಮೆಯಲ್ಲಿ ಅವಕಾಶ ನೀಡುವ ಹಾಗೂ

ಬಾಲ ಕಾರ್ಮಿಕ ಕಾನೂನು ತಿದ್ದುಪಡಿಗೆ ಸರ್ಕಾರ ಒಪ್ಪಿಗೆ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ೧೪ ವರ್ಷದ ಕೆಳಗಿನ ಮಕ್ಕಳು ಕೌಟುಂಬಿಕ ಉದ್ಯಮ ಅಥವಾ ಮನರಂಜನಾ ಉದ್ದಿಮೆಯಲ್ಲಿ ಅವಕಾಶ ನೀಡುವ ಹಾಗೂ ಇನ್ನೆಲೆಡೆ ಸಂಪೂರ್ಣ ನಿಷೇಧಿಸುವ ಮಕ್ಕಳ ಕಾರ್ಮಿಕ ಕಾನೂನಿಗೆ ತಿದ್ದುಪಡಿ ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ.

ಈ ಹಿಂದೆ ಮೂಲ ಬಾಲ ಕಾರ್ಮಿಕ ಕಾನೂನು ಅಡಿಯಲ್ಲಿ ಅಪಾಯಕಾರಿ ಉದ್ದಿಮೆಗಳಲ್ಲಿ ೧೪ ರಿಂದ ೧೮ ವರ್ಷದ ಮಕ್ಕಳು ದುಡಿಯುವುದನ್ನು ನಿಷೇದಿಸಲಾಗಿತ್ತು.

ಈ ಹೊಸ ತಿದ್ದುಪಡಿಯಲ್ಲೂ ೧೪ ರಿಂದ ೧೮ ವರ್ಷದ ಮಕ್ಕಳು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸ ಮಾಡುವುದನ್ನು ನಿಷೇದಿಸಿದೆ.

ಈ ಕಾನೂನನ್ನು ಉಲ್ಲಂಘಿಸಿದವರಿಗೆ ಹೆಚ್ಚಿನ ಶಿಸ್ತಿನ ಕ್ರಮಗಳನ್ನು ಈ ಹೊಸ ಕಾನೂನು ಉಲ್ಲೇಖಿಸಿದೆ. ಮೊದಲ ಉಲ್ಲಂಘನೆಗೆ ಪೋಷಕರಿಗೆ ಯಾವುದೇ ಶಿಕ್ಷೆ ಇಲ್ಲದಿದ್ದರೂ, ಕೆಲಸದ ಒಡೆಯರಿಗೆ ಮೊದಲ ಉಲ್ಲಂಘನೆಗೆ ಶಿಕ್ಷೆ ಜಾರಿಯಾಗಲಿದೆ.

ಮರು ಉಲ್ಲಂಘನೆಗೆ ಮಾತ್ರ ಪೋಷಕರಿಗೆ ೧೦,೦೦೦ ದಂಡ ಶಿಕ್ಷೆ ವಿಧಿಸಲಾಗುತ್ತದೆ.

ಮೊದಲ ಉಲ್ಲಂಘನೆಗೆ ಕೆಲಸದ ಒಡೆಯರಿಗೆ ದಂಡವನ್ನು ೨೦ ಸಾವಿರದಿಂದ ೫೦ ಸಾವಿರಕ್ಕೆ ಅಂದರೆ ಎರಡುವರೆ ಪಟ್ಟು ಹೆಚ್ಚಿಸಲಾಗಿದೆ.

ಎರಡನೇ ಮತ್ತು ಮರು ಉಲ್ಲಂಘನೆಗಳಿಗೆ ಒಂದು ವರ್ಷದಿಂದ ಮೂರು ವರ್ಷ ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ.

ಈಗ ಸಂಪುಟ ಸಭೆ ಈ ತಿದ್ದುಪಡಿಗೆ ಒಪ್ಪಿಗೆ ನೀಡಿದ್ದು ಬಾಲ ಕಾರ್ಮಿಕ (ತಡೆ ಹಾಗು ನಿಯಂತ್ರಣ) ತಿದ್ದುಪಡಿ ಕಾಯ್ದೆ ೨೦೧೨ ರನ್ನು ಲೋಕಸಭೆಯಲ್ಲಿ ಮಂಡಿಸಲಾಗುವುದು.

ಉದ್ದಿಮೆದಾರರು ತಮ್ಮ ಉದ್ದಿಮೆಯಲ್ಲಿ ಮಕ್ಕಳಿಗೆ ಪಾರಂಪರಿಕ ಕಲೆ ಮತ್ತು ಕೆಲಸಗಳನ್ನು ಕಲಿಸಿಕೊಡಲು ಇದು ಸಹಕಾರಿ ಎಂದಿದ್ದರೆ, ಮಕ್ಕಳ ಹಕ್ಕುಗಳ ಹೋರಾಟಗಾರು ಇದನ್ನು ವಿರೋಧಿಸಿದ್ದಾರೆ. ೧೪ ವರ್ಷದ ಕೆಳಗಿನ ಮಕ್ಕಳು ಕೌಟುಂಬಿಕ ಉದ್ಯಮ ಅಥವಾ ಮನರಂಜನಾ ಉದ್ದಿಮೆಯಲ್ಲಿ ಅವಕಾಶ ನೀಡಿರುವುದರಿಂದ ಈ ವಿರೋಧ ಕೇಳಿಬಂದಿದೆ.

ಸರ್ಕಸ್ ಹೊರತುಪಡಿಸಿ ಜಾಹೀರಾತು, ಸಿನೆಮಾ, ಟಿವಿ, ರೇಡಿಯೋ ಇವುಗಳನ್ನು ಒಳಗೊಂಡಂತೆ ದೃಶ್ಯ ಶ್ರವಣ ಮನರಂಜನಾ ಮಾಧ್ಯಮ, ಹಾಗೂ ಕ್ರೀಡೆಗಳಲ್ಲಿ ಮಕ್ಕಳು ಭಾಗವಹಿಸಲು ಈ ಕಾಯ್ದೆ ಅವಕಾಶ ನೀಡುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.