ಪ್ರಧಾನ ಸುದ್ದಿ

ಆರ್ ಜೆ ಡಿಯಿಂದ ಪಪ್ಪು ಯಾದವ್ ಉಚ್ಛಾಟನೆ; ಬಿಜೆಪಿ ಸೇರುವ ಸಾಧ್ಯತೆ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಹೊಂದಾಣಿಕೆಯನ್ನು ವಿರೋಧಿಸಿದ್ದ ವಿವಾದಾತ್ಮಕ ಆರ್ ಜೆ ಡಿ ಲೋಕಸಭಾ ಸದಸ್ಯ ಪಪ್ಪು ಯಾದವ್

ಆರ್ ಜೆ ಡಿಯಿಂದ ಪಪ್ಪು ಯಾದವ್ ಉಚ್ಛಾಟನೆ; ಬಿಜೆಪಿ ಸೇರುವ ಸಾಧ್ಯತೆ
ಪಪ್ಪು ಯಾದವ್
Published On :

ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಹೊಂದಾಣಿಕೆಯನ್ನು ವಿರೋಧಿಸಿದ್ದ ವಿವಾದಾತ್ಮಕ ಆರ್ ಜೆ ಡಿ ಲೋಕಸಭಾ ಸದಸ್ಯ ಪಪ್ಪು ಯಾದವ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಇವರು ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಜೊತೆ ಕೈಜೋಡಿಸಲಿದ್ದಾರೆ ಎಂದು ಊಹಿಸಲಾಗಿದೆ.

"ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಪಪ್ಪು ಯಾದವ್ ಅವರನ್ನು ಆರು ವರ್ಷದವರೆಗೆ ಉಚ್ಛಾಟಿಸಲಾಗಿದೆ" ಎಂದು ಆರ್ ಜೆ ಡಿ ಪ್ರಧಾನ ಕಾರ್ಯದರ್ಶಿ ರಾಮದೇವೊ ಭಂಡಾರಿ ತಿಳಿಸಿದ್ದಾರೆ.

ಐದು ಬಾರಿಗೆ ಲೋಕಸಭಾ ಸದಸ್ಯರಾಗಿರುವ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಕಳೆದ ಲೋಕಸಭಾ ಚುನಾವಣೆಗಳಲ್ಲಿ ಜೆ ಡಿ ಯು ಪಕ್ಷದ ಶರದ್ ಯಾದವ್ ಅವರನ್ನು ಮಾಧೆಪುರ ಕ್ಷೇತ್ರದಿಂದ ಸೋಲಿಸಿದ್ದರು ಹಾಗು ಜನತಾ ಪರಿವಾರದ ವಿಲೀನವನ್ನು ವಿರೋಧಿಸಿ ಲಾಲು ಪ್ರಸಾದ್ ಯಾದವ್ ಅವರನ್ನು ದೂಷಿಸುತ್ತಿದ್ದರು. ಹಾಗೆಯೇ ಲಾಲು ಅವರ ಮಗ ಆರ್ ಜೆ ಡಿ ಪಕ್ಷವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದನ್ನು ಬಲವಾಗಿ ವಿರೋಧಿಸಿದ್ದರು.

ಇವರು ಲೋಕಸಭೆಯಲ್ಲಿ ಆರ್ ಜೆ ಡಿ ಪಕ್ಷದಿಂದ ಆಯ್ಕೆಯಾದ ನಾಲ್ವರು ಸದಸ್ಯರಲ್ಲಿ ಒಬ್ಬರು ಹಾಗು ಇವರ ಪತ್ನಿ ರಂಜಿತ್ ರಂಜನ್ ಕಾಂಗ್ರೆಸ್ ಪಕ್ಷದ ಟಿಕೆಟ್ ನಿಂದ ಗೆದ್ದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.