ಟಾಮ್ ಮೂಡಿ ಅಸಮಾಧಾನ
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸೋಲು ಕಂಡ ಸನ್‍ರೈಸರ್ಸ್ ತಂಡದ ವಿರುದ್ಧ ಆ ತಂಡದ ತರಬೇತುದಾರ ಟಾಮ್ ಮೂಡಿ...

ಮುಂಬೈ: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸೋಲು ಕಂಡ ಸನ್‍ರೈಸರ್ಸ್ ತಂಡದ ವಿರುದ್ಧ ಆ ತಂಡದ ತರಬೇತುದಾರ ಟಾಮ್ ಮೂಡಿ
ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳಪೆ ಬ್ಯಾಟಿಂಗ್‍ನಿಂದಾಗಿ ಹೈದರಾಬಾದ್ ತಂಡ ಸೋಲು ಕಾಣಬೇಕಾಯಿತು ಎಂದು ಅವರು ಹೇಳಿದ್ದಾರೆ. ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಕೋಲ್ಕತಾ ತಂಡವನ್ನು 167 ರನ್‍ಗಳ ಮೊತ್ತಕ್ಕೆ ಕಟ್ಟಿಹಾಕಿದ್ದು ಸರಿ. ಆದರೆ, ಪಂದ್ಯ ಗೆಲ್ಲಲು ಬೇಕಿದ್ದ 168 ರನ್‍ಗಳ ಗುರಿ ಅಸಾಧ್ಯವಾಗಿರಲಿಲ್ಲ. ಆದರೆ, ನಮ್ಮ ಆಟಗಾರರು ಈ ಗುರಿಯನ್ನು ಮೆಟ್ಟುವಲ್ಲಿ ವಿಫಲರಾದರು' ಎಂದು ಅವರು ಬೇಸರ ವ್ಯಕ್ತಪಡಿಸಿದರು.
`ಮೊದಲ ಓವರ್‍ನಲ್ಲೇ ನಾಯಕ ಹಾಗೂ ಆರಂಭಿಕ ಡೇವಿಡ್ ವಾರ್ನರ್ ಹಾಗೂ ಮೂರನೇ ಕ್ರಮಾಂಕದ ನಮನ್ ಓಜಾ ಅವರು ವಿಕೆಟ್ ಒಪ್ಪಿಸಿದ್ದು ತಂಡಕ್ಕೆ ಶಾಕ್ ನೀಡಿತು' ಎಂದ ಅವರು, ಮಧ್ಯಮ ಕ್ರಮಾಂಕದ ಹೆನ್ರಿಕ್ಸ್ ಬಿಟ್ಟರೆ ಮಿಕ್ಕವರ್ಯಾರೂ ಹೆಚ್ಚು ಆಡದಿದ್ದುದು ತಂಡ ಪರಾಭವ ಹೊಂದಲು ಪ್ರಮುಖ ಕಾರಣವಾಯಿತು' ಎಂದು ಅವರು ವಿಶ್ಲೇಷಿಸಿದರು. ಸನ್‍ರೈಸರ್ಸ್ ತಂಡದ ಕೈಯ್ಯಲ್ಲಿ ಇನ್ನೂ ಐದು ಪಂದ್ಯಗಳಿದ್ದು, ಆ ಪಂದ್ಯಗಳಲ್ಲಿ ಸಕಾರಾತ್ಮಕ ಫಲಿತಾಂಶ ನೀಡುವ ಬಗ್ಗೆ ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


