ದೆಹಲಿಯಲ್ಲಿ ಉಗಾಂಡ ಮಹಿಳೆಯ ರೇಪ್ ಪ್ರಕರಣ: ಇಬ್ಬರಿಗೆ ೩೦ ವರ್ಷ ಸಜೆ
ಉಗಾಂಡ ಮಹೆಳೆಯೊಬ್ಬಳನ್ನು ಅಪಹರಿಸಿ ಗ್ಯಾಂಗ್ ರೇಪ್ ಮಾಡಿದ ಪ್ರಕರಣದಲ್ಲಿ ತಪ್ಪಿತಸ್ಥರಾದ ಇಬ್ಬರಿಗೆ ೩೦ ವರ್ಷ ಜೈಲು ಸಜೆ ನೀಡಿ ದೆಹಲಿ ಕೋರ್ಟ್
ನವದೆಹಲಿ: ಉಗಾಂಡ ಮಹಿಳೆಯೊಬ್ಬಳನ್ನು ಅಪಹರಿಸಿ ಗ್ಯಾಂಗ್ ರೇಪ್ ಮಾಡಿದ ಪ್ರಕರಣದಲ್ಲಿ ತಪ್ಪಿತಸ್ಥರಾದ ಇಬ್ಬರಿಗೆ ೩೦ ವರ್ಷ ಜೈಲು ಸಜೆ ನೀಡಿ ದೆಹಲಿ ಕೋರ್ಟ್ ತೀರ್ಪು ಪ್ರಕಟಿಸಿದೆ. "ಅವರ ಈ ಕೆಲಸ ವಿಶ್ವದ ಮುಂದೆ ಭಾರತವನ್ನು ಅವಹೇಳನ ಮಾಡಿದೆ" ಎಂದಿರುವ ನ್ಯಾಯಧೀಶರು ಇಬ್ಬರೂ ಕಠಿಣ ಸಜೆಗೆ ಅರ್ಹರು ಎಂದಿದ್ದಾರೆ.
ದೆಹಲಿ ನಿವಾಸಿಗಳಾದ ರಾಜ್ ಕುಮಾರ್ ಮತ್ತು ದಿನೇಶ್ ಶರ್ಮ ಅವರಿಗೆ ೫೦ ಸಾವಿರ ದಂಡವನ್ನೂ ವಿಧಿಸಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿರೇಂದರ್ ಭಟ್ "ಒಬ್ಬಳೇ ವಿದೇಶಿ ಯುವತಿ, ತಡರಾತ್ರಿಯಲ್ಲಿ ನಡೆದು ಹೋಗುತ್ತಿರುವಾಗ ತೋಳಗಳ ತರಹ ಈ ತಪ್ಪಿತಸ್ಥರು ಹುಡುಗಿಯನ್ನು ಅಪಹರಿಸಿದ್ದಾರೆ" ಎಂದಿದ್ದಾರೆ.
"ವಿದೇಶಿ ಮಹಿಳೆಯನ್ನು ತಮ್ಮ ಗುರಿಯಾಗಿಸಿಕೊಂಡಿರುವ ಇವರಿಗೆ ದೇಶದ ಘನತೆ ಮಾತು ಗೌರವದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಎಂದು ತೋರಿಸಿದ್ದಾರೆ. ಅವರ ಈ ಕೆಲಸ ವಿಶ್ವದ ಮುಂದೆ ಭಾರತವನ್ನು ಅವಹೇಳನ ಮಾಡಿದೆ. ಇಂತಹ ಘಟನೆಗಳು ದೇಶಕ್ಕೆ ಕೆಟ್ಟ ಹೆಸರು ತರುತ್ತದೆ" ಎಂದು ನ್ಯಾಯಾಧೀಶ ಹೇಳಿದ್ದಾರೆ.
ಈ ಕೃತ್ಯವನ್ನು ಎಷ್ಟು ಹೀನಾಯವಾಗಿ ಎಸಗಿದ್ದಾರೆ ಎಂದರೆ "ಮಹಿಳೆಯ ಘನತೆ ಮತ್ತು ಗೌರವದ ಮೇಲೂ ಕಿಂಚಿತ್ತು ಚಿಂತೆಯಿಲ್ಲ ಅವರಿಗೆ ಎಂಬುದನ್ನು ತೋರಿಸುತ್ತದೆ" ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

