ಪ್ರಧಾನ ಸುದ್ದಿ

ಹೆಣ್ಣು ಭ್ರೂಣ ಹತ್ಯೆ: ಭಾರತೀಯ ಅಮೇರಿಕನ್ ಮಹಿಳೆಗೆ ೨೦ ವರ್ಷ ಜೈಲು ಶಿಕ್ಷೆ

ಕಳೆದ ತಿಂಗಳು ಹೆಣ್ಣು ಭ್ರೂಣಹತ್ಯೆಗೆ ಮಾಡಿ ತಪ್ಪಿತಸ್ಥಳೆಂದು ಸಾಬೀತಾಗಿದ್ದ ಭಾರತೀಯ ಅಮೇರಿಕನ್ ಮಹಿಳೆಗೆ ೨೦ ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

ಹೆಣ್ಣು ಭ್ರೂಣ ಹತ್ಯೆ: ಭಾರತೀಯ ಅಮೇರಿಕನ್ ಮಹಿಳೆಗೆ ೨೦ ವರ್ಷ ಜೈಲು ಶಿಕ್ಷೆ
ಸಾಂದರ್ಭಿಕ ಚಿತ್ರ
Published On :

ವಾಶಿಂಗ್ಟನ್: ಕಳೆದ ತಿಂಗಳು ಹೆಣ್ಣು ಭ್ರೂಣಹತ್ಯೆಗೆ ಮಾಡಿ ತಪ್ಪಿತಸ್ಥಳೆಂದು ಸಾಬೀತಾಗಿದ್ದ ಭಾರತೀಯ ಅಮೇರಿಕನ್ ಮಹಿಳೆಗೆ ೨೦ ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

ಇಂಡಿಯಾನಾದ ಸೌತ್ ಬೆಂಡ್ ನ್ಯಾಯಾಧೀಶ ಸೋಮವಾರ ಈ ಶಿಕ್ಷೆಯನ್ನು ಘೋಷಿಸಿದ್ದಾರೆ ಎಂದು ಸಾರ್ವಜನಿಕ ಅಂತರಾಷ್ಟ್ರೀಯ ರೇಡಿಯೋ ಅಂತರ್ಜಾಲ ವರದಿ ಮಾಡಿದೆ.

ದಕ್ಷಿಣ ಬೆಂಡ್ ನ ಇಂಡಿಯಾನಾದ ಗ್ರಾಂಗರ್ ನಲ್ಲಿ ನೆಲೆಸಿರುವ ಭಾರತೀಯ ವಲಸಿಗ ಮಹಿಳೆ ೩೩ ವರ್ಷದ ಪೂರ್ವಿ ಪಟೇಲ್ ಶಿಕ್ಷೆಗೆ ಗುರಿಯಾದವರು.

ಹಾಂಕಾಂಗ್ ನಿಂದ ಔಷಧಿ ತರಿಸಿ ಈ ಭ್ರೂಣ ಹತ್ಯೆಗೆ ಕಾರಣವಾಗಿದ್ದನ್ನು ಪೊಲೀಸರು ಶೋಧಿಸಿ ಪಟೇಲ್ ಅವರನ್ನು ಬಂಧಿಸಿದ್ದರು.

ಇಂಡಿಯಾನಾದಲ್ಲಿ ಮಹಿಳಾ ಭ್ರೂಣಹತ್ಯೆಗೆ ಶಿಕ್ಷೆಗೆ ಗುರಿಯಾಗಿರುವ ಮೊದಲ ಮಹಿಳೆಯಾಗಿದ್ದಾರೆ ಪಟೇಲ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.