ಮುಸ್ಲಿಮರು ದೇವಾಲಯ ಸ್ಥಾಪಿಸುವುದರ ವಿರುದ್ಧ ಫತ್ವಾ ಹೊರಡಿಸಿದ ಇಸ್ಲಾಮಿಕ್ ಸಂಘಟನೆ
ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರಿಗೆ ದೇವಾಲಯ ನಿರ್ಮಿಸಬೇಕೆಂದಿರುವ ಉತ್ತರ ಪ್ರದೇಶದ ಸಚಿವ ಅಜಮ್ ಖಾನ್ ಅವರ

ಲಕನೌ: ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರಿಗೆ ದೇವಾಲಯ ನಿರ್ಮಿಸಬೇಕೆಂದಿರುವ ಉತ್ತರ ಪ್ರದೇಶದ ಸಚಿವ ಅಜಮ್ ಖಾನ್ ಅವರ ಹೇಳಿಕೆಗೆ ಅಡ್ಡಿಯಾಗಿ ಪರಿಣಮಿಸಿರುವ ಇಸ್ಲಾಮಿಕ್ ಸಂಘಟನೆಯೊಂದು ಮುಸ್ಲಿಮನೊಬ್ಬನ ಈ ನಡೆ ಇಸ್ಲಾಂ ವಿರೋಧಿ ಮತ್ತು 'ನ್ಯಾಯಬಾಹಿರ' ಎಂದು ಫತ್ವಾ ಹೊರಡಿಸಿದ್ದಾರೆ.
"ಇಸ್ಲಾಂನಲ್ಲಿ ಅಲ್ಲಾಹುನನ್ನು ಹೊರತುಪಡಿಸಿ ಬೇರೆಯವರನ್ನು ನಂಬುವುದು ನ್ಯಾಯಬಾಹಿರ ಮತ್ತು ದೇವಾಲಯವನ್ನು ಕಟ್ಟುವುದು ಕೂಡ ಅಷ್ಟೇ ತಪ್ಪು" ಎಂದು ಮಾದರಸ ಮಂಜರ್ ಎ ಇಸ್ಲಾಂ ತಿಳಿಸಿದೆ.
"ದೇವಾಲಯವನ್ನು ಕಟ್ಟುವ ಮುಸ್ಲಿಂ ಚಟುವಟಿಕೆಗಳು ಸರಿಯಲ್ಲ. ಅವನು ಅಪರಾಧಿ ಮತ್ತು ಅವನ್ನು ಶಿಕ್ಷಿಸಲಾಗುತ್ತದೆ. ಅವನಿಗೆ ಪತ್ನಿಯಿದ್ದರೆ ವಿಷಾದ ವ್ಯಕ್ತಪಡಿಸಿ ಅವರನ್ನು ಮತ್ತೆ ಮದುವೆಯಾಗಬೇಕಾಗುತ್ತದೆ." ಎಂದು ಮದರಸಾದ ಫತ್ವಾ ಇಲಾಖೆ ತಿಳಿಸಿದೆ.
"ನಾನು ನೇತಾಜಿ (ಮುಲಾಯಂ) ಅವರ ಮುಂದೆ ಅವರ ದೇವಾಲಯ ನಿರ್ಮಿಸಲು ನನ್ನ ಪ್ರಸ್ತಾವನೆ ಸಲ್ಲಿಸುತ್ತೇನೆ. ಅವರು ಅನುಮತಿ ನೀಡಿದರೆ ಅದನ್ನು ನಿರ್ಮಿಸಲಾಗುವುದು" ಎಂದು ಅಜಮ್ ಫೆಬ್ರವರಿ ೧೨ ರಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


