ಪ್ರಧಾನ ಸುದ್ದಿ

ವಿದೇಶಾಂಗ ಸಚಿವಾಲಯದ ನೂತನ ವಕ್ತಾರನಾಗಿ 'ಸ್ಲಂ ಡಾಗ್ ಮಿಲಿಯನೇರ್' ಲೇಖಕ

ಹಿರಿಯ ಅಧಿಕಾರಿ ವಿಕಾಸ್ ಸ್ವರೂಪ್ ಅವರ ಚೊಚ್ಚಲ ಕಾದಂಬರಿ 'ಕ್ಯು&ಎ', 'ಸ್ಲಂ ಡಾಗ್ ಮಿಲಿಯನೇರ್' ಸಿನೆಮಾವಾಗಿ ರೂಪಾಂತರ ಪಡೆದು ಆಸ್ಕರ್ ಗೆದ್ದಿದ್ದು

ವಿದೇಶಾಂಗ ಸಚಿವಾಲಯದ ನೂತನ ವಕ್ತಾರನಾಗಿ 'ಸ್ಲಂ ಡಾಗ್ ಮಿಲಿಯನೇರ್' ಲೇಖಕ
ವಿಕಾಸ್ ಸ್ವರೂಪ್-ಸಯ್ಯದ್ ಅಕ್ಬರುದ್ದೀನ್
Published On :

ನವದೆಹಲಿ: ಹಿರಿಯ ಅಧಿಕಾರಿ ವಿಕಾಸ್ ಸ್ವರೂಪ್ ಅವರ ಚೊಚ್ಚಲ ಕಾದಂಬರಿ 'ಕ್ಯು&ಎ', 'ಸ್ಲಂ ಡಾಗ್ ಮಿಲಿಯನೇರ್' ಸಿನೆಮಾವಾಗಿ ರೂಪಾಂತರ ಪಡೆದು ಆಸ್ಕರ್ ಗೆದ್ದಿದ್ದು ತಿಳಿದಿರಬೇಕಷ್ಟೇ. ಈಗ ವಿಕಾಸ್ ಸ್ವರೂಪ್ ವಿದೇಶಾಂಗ ಸಚಿವಾಲಯದ ವಕ್ತಾರರಾಗಿ ಸಯ್ಯದ್ ಅಕ್ಬರುದ್ದೀನ್ ಅವರನ್ನು ಬದಲಿಸಿದ್ದಾರೆ.

ಸಯ್ಯದ್ ಅಕ್ಬರುದ್ದೀನ್ ಅವರಿಗೆ ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿ ಮುಂಬಡ್ತಿ ನೀಡಿರುವುದರಿಂದ ೧೯೮೬ ಐ ಎಫ್ ಎಸ್ ಅಧಿಕಾರಿ ಸ್ವರೂಪ್, ಸಯ್ಯದ್ ಅವರನ್ನು ಬದಲಿಸಿದ್ದಾರೆ. ಸಯ್ಯದ್ ಅಕ್ಬರುದ್ದೀನ್ ಅಕ್ಟೋಬರ್ ನಲ್ಲಿ ನಡೆಯಲಿರುವ ಭಾರತ-ಆಫ್ರಿಕಾ ಶೃಂಗಸಭೆಯ ಮುಖ್ಯ ಒಡಂಬಡಿಗರಾಗಿ ಕೂಡ ಹೆಚ್ಚುವರಿ ಅಧಿಕಾರ ಕೂಡ ನೀಡಲಾಗಿದೆ.

ಸದ್ಯಕ್ಕೆ ವಿದೇಶಾಂಗ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿರುವ (ವಿಶ್ವಸಂಸ್ಥೆ-ರಾಜಕೀಯ) ಸ್ವರೂಪ್ ಏಪ್ರಿಲ್ ೧೮ರಿಂದ ಈ ಹೊಸ ಅಧಿಕಾರವನ್ನು ಸ್ವೀಕರಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷತೆ ಮತ್ತು ವೃತ್ತಿಪರತೆಗೆ ಹೆಸರುವಾಸಿಯಾದ ಅಕ್ಬರುದ್ದೀನ್ ಈ ಹುದ್ದೆಯಲ್ಲಿ ಮೂರು ವರ್ಷಗಳಿಂದ ನಿರತರಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.