ದೆಹಲಿಯಲ್ಲಿ ನೀರಿನ ಕೊರತೆಯಾದರೆ ವಿಐಪಿಗಳಿಗೆ ನೀರು ನಿಲ್ಲಿಸುತ್ತೇನೆ: ಕೇಜ್ರಿವಾಲ್
ಬೇಸಿಗೆಯ ಬೇಗೆಯಲ್ಲಿ ನಗರದಲ್ಲಿ ನೀರಿಗೆ ತೊಂದರೆಯಾಗುವ ಸನ್ನಿವೇಶವಿದ್ದು, ಹಾಗೇನಾದರೂ ಆದರೆ ಪ್ರಧಾನಮಂತ್ರಿ, ರಾಷ್ಟ್ರಪತಿ ಮತ್ತು ರಾಯಭಾರಿಗಳನ್ನು

ನವದೆಹಲಿ: ಬೇಸಿಗೆಯ ಬೇಗೆಯಲ್ಲಿ ನಗರದಲ್ಲಿ ನೀರಿಗೆ ತೊಂದರೆಯಾಗುವ ಸನ್ನಿವೇಶವಿದ್ದು, ಹಾಗೇನಾದರೂ ಆದರೆ ಪ್ರಧಾನಮಂತ್ರಿ, ರಾಷ್ಟ್ರಪತಿ ಮತ್ತು ರಾಯಭಾರಿಗಳನ್ನು ಹೊರತುಪಡಿಸಿ ದೆಹಲಿಯ ಗಣ್ಯರಿಗೆ ನೀರನ್ನು ಕಡಿತಗೊಳಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೂಚನೆ ನೀಡಿದ್ದಾರೆ.
ದೆಹಲಿ ವಿಧಾನಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್ ನೀರಿನ ಕೊರತೆಯಾದರೆ ಕೆಲವರನ್ನು ಹೊರತುಪಡಿಸಿ ಎಲ್ಲ ವಿಐಪಿಗಳು ಇದರ ಬೇಗೆಯನ್ನು ಸಹಿಸಿಕೊಳ್ಳಬೇಕು ಎಂದಿದ್ದಾರೆ. ದೆಹಲಿ ಚುನಾವಣೆಯ ನಂತರ ನಗರಕ್ಕೆ ನೀರಿನ ಪೂರೈಕೆಯನ್ನು ಸ್ಥಗಿತಗೊಳಿಸಿರುವ ಬಿಜೆಪಿ ಆಡಳಿತದ ಹರ್ಯಾಣ ರಾಜ್ಯದ ಮೇಲೂ ಹರಿಹಾಯ್ದಿದ್ದಾರೆ.
"ನೀರಿನ ಮೇಲೆ ರಾಜಕೀಯ ಮಾಡಬಾರದು. ಈ ವರ್ಷ ನೀರಿನ ವ್ಯತ್ಯಯ ಆದರೆ, ಆ ತೊಂದರೆ ಎಲ್ಲರೂ ಅನುಭವಿಸುವ ಹಾಗೆ ದೆಹಲಿ ಜಲಮಂಡಲಿ ನೋಡಿಕೊಳ್ಳಬೇಕು. ನೀರಿನ ಪೂರೈಕೆಯ ವ್ಯತ್ಯಯವನ್ನು ನನ್ನನ್ನು ಸೇರಿಸಿದಂತೆ ಎಲ್ಲ ವಿಐಪಿಗಳು ಅನುಭವಿಸಲಿದ್ದಾರೆ. ಪ್ರಧಾನಿ, ರಾಷ್ಟ್ರಪತಿ, ರಾಯಭಾರ ಕಚೇರಿಗಳು ಮತ್ತು ತುರ್ತು ಸೇವೆಗಳನ್ನಷ್ಟೆ ಇದರಿಂದ ಹೊರಗಿಡಲಿದ್ದೇವೆ" ಎಂದಿದ್ದಾರೆ ಕೇಜ್ರಿವಾಲ್.
ಸದ್ಯದ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸಚಿವರು, ಲೋಕಸಭಾ ಸದಸ್ಯರು ಮತ್ತು ಅಧಿಕಾರಶಾಹಿಗೆ ನಿರಂತರ ನೀರಿನ ಪೂರೈಕೆ ಇದೆ.
ಪಕ್ಕದ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಹರ್ಯಾಣದ ನೀರು ಪೂರೈಕೆಯ ಮೇಲೆ ದೆಹಲಿ ಅವಲಂಬಿತವಾಗಿದೆ. ಬೇಸಿಗೆಯಲ್ಲಿ ದೆಹಲಿಯಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಆಗುವುದು ಸರ್ವೇಸಾಮಾನ್ಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


