ಮೆಟ್ರೋ ಕಾಮಗಾರಿ ಕೂಡಲೇ ಮುಗಿಸಿ
ರಾಜ್ಯ ಸರ್ಕಾರದ ಬಹುಕಾಲದ ಮಹತ್ವಾಕಾಂಕ್ಷೆ ಯೋಜನೆ ಮೆಟ್ರೊ ಕಾಮಗಾರಿ ಶೀಘ್ರ ಮುಕ್ತಾಯಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದು...

ಬೆಂಗಳೂರು: ರಾಜ್ಯ ಸರ್ಕಾರದ ಬಹುಕಾಲದ ಮಹತ್ವಾಕಾಂಕ್ಷೆ ಯೋಜನೆ ಮೆಟ್ರೊ ಕಾಮಗಾರಿ ಶೀಘ್ರ ಮುಕ್ತಾಯಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದು, 5 ವರ್ಷದಲ್ಲಿ 2ನೇ ಹಂತದ ಮೆಟ್ರೋ ಕಾರ್ಯ ಪೂರ್ಣಗೊಳಿಸುವುದಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಭರವಸೆ ನೀಡಿದ್ದಾರೆ.
ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜತೆ ಪ್ರಧಾನಿ ಮೋದಿ ಆಯೋಜಿಸಿದ್ದ `ಪ್ರಗತಿ' ವಿಡಿಂಯೋ ಕಾನ್ಫರೆನ್ಸ್ ಸಂವಾದ ಭಾಗವಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿ ಕ್ ಮುಖರ್ಜಿಗೆ ಈ ಸಲಹೆ ನೀಡಿದ್ದಾರೆ. ಪ್ರಧಾನಿ ಅವರಿಗೆ ವಿವರಣೆ ನೀಡಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಪರವಾಗಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್, ಮೆಟ್ರೊ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಕರೋಲಾ, ಉನ್ನತ ಶಿಕ್ಷಣ ಆಯುಕ್ತ ರಾಜಕುಮಾರ್ ಖತ್ರಿ, ಕೌಶಿಕ್ ಮುಖರ್ಜಿ ಅವರಿಗೆ ಸಾಥ್ ನೀಡಿದ್ದರು.
ಮೆಟ್ರೊ ಮತ್ತು ಸ್ವಚ್ಛ ಭಾರತ ಯೋಜನೆ ಭಾಗವಾಗಿ ರಾಜ್ಯದಲ್ಲಿ ನಡೆಯುತ್ತಿರುವ ಶುಚಿತ್ವ ಕಾರ್ಯಕ್ರಮಗಳ ಬಗ್ಗೆ ಮೋದಿ ಹೆಚ್ಚು ವಿವರಣೆ ಬಯಸಿದರು. ಮೆಟ್ರೊ ಮೊದಲ ಹಂತದ ಕಾರ್ಯಕ್ರಮದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಪ್ರಧಾನಿ, 2ನೇ ಹಂತದ ಕಾಮಗಾರಿ ಯನ್ನು ಬೇಗ ಮುಕ್ತಾಯಗೊಳಿಸುವಂತೆ ಸಲಹೆ ನೀಡಿದರು. 2015ರ ಡಿಸೆಂಬರ್ ಅಂತ್ಯದ ವೇಳೆಗೆ ಮೆಟ್ರೊ 1ನೇ ಹಂತದ ಎಲ್ಲ ಕೆಲಸ ಪೂರ್ಣಗೊಳಿಸಲಾಗುವುದು.
ಭೂ ಸ್ವಾಧೀನದಲ್ಲಿ ವಿಳಂಬವಾದ್ದರಿಂದ 1ನೇ ಹಂತದ ಮುಕ್ತಾಯಕ್ಕೆ ತಡವಾಯಿತು. 2ನೇ ಹಂತದ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೇ ಈಗಾಗಲೇ ಆರಂಭಗೊಂಡಿದ್ದು, 2016ರ ಏಪ್ರಿಲ್ ಅಂತ್ಯಕ್ಕೆ ಪೂರ್ಣಗೊಳ್ಳುತ್ತದೆ. 5 ವರ್ಷದಲ್ಲಿ 2ನೇ ಹಂತ ಮುಕ್ತಾಯಗೊಳ್ಳುತ್ತದೆ ಎಂದು ಕೌಶಿಕ್ ಮುಖರ್ಜಿ ಸ್ಪಷ್ಟೀಕರಣ ನೀಡಿದರು. ಯೋಜನೆಗೆ ಅಗತ್ಯವಾದ ರು. 26800 ಕೋಟಿ ಇನ್ನೂ ಬಿಡುಗಡೆಯಾಗಿಲ್ಲ. ಈ ಸಂಬಂಧ ಫ್ರೆಂಚ್ ಹಣಕಾಸು ಸಂಸ್ಥೆ ಜತೆ ಚರ್ಚೆ ನಡೆಯುತ್ತಿದೆ.
ಖಾಸಗಿ ಬಿಲ್ಡರ್ ಗಳಿಂದಲೂ ಹಣ ಹೂಡಿಕೆ ಮಾಡಿಸುವ ಬಗ್ಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದರು. ದೇಶದ ಪ್ರಗತಿ! ಪ್ರಧಾನಿ ನರೇಂದ್ರ ಮೋದಿ, ಮಹತ್ವಾಕಾಂಕ್ಷೆಯ ಬಹುಪಯೋಗಿ ಮತ್ತು ಬಹು ಮಾದರಿಯ ವೇದಿಕೆ `ಪ್ರಗತಿ' ಉದ್ಘಾಟಿಸಿದರು. ಹೆಸರೇ ಹೇಳುವಂತೆ ಇದು ಸಾಮಾನ್ಯ ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಕಾರ್ಯ ಕ್ರಮಗಳು ಮತ್ತು ಯೋಜನೆಗಳ ಮೇಲ್ವಿಚಾರಣೆ ಯನ್ನೂ ಮಾಡಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


