ಪ್ರಧಾನ ಸುದ್ದಿ

ವಿಕೃತಕಾಮಿ-ಕೊಲೆಪಾತಕಿಗೆ ೨೩ವರ್ಷಗಳ ಕಠಿಣ ಸಜೆ

೩ ವರ್ಷದ ಹಿಂದೆ ಐದು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಮಾಡಿದ ಆರೋಪದ ಮೇಲೆ ದೇವಾಲಯದ ಅರ್ಚಕನೊಬ್ಬನಿಗೆ (೫೦)

ವಿಕೃತಕಾಮಿ-ಕೊಲೆಪಾತಕಿಗೆ ೨೩ವರ್ಷಗಳ ಕಠಿಣ ಸಜೆ
ಕುಮಾರ್ ಅಲಿಯಾಸ್ ಕುಮಾರ್ ಗುರುಕುಲ್
Published On :

ವೆಲ್ಲೂರು: ೩ ವರ್ಷದ ಹಿಂದೆ ಐದು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಮಾಡಿದ ಆರೋಪದ ಮೇಲೆ ದೇವಾಲಯದ ಅರ್ಚಕನೊಬ್ಬನಿಗೆ (೫೦) ಮಂಗಳವಾರ ಮಹಿಳಾ ನ್ಯಾಯಾಲಯ ೨೩ ವರ್ಷದ ಕಠಿಣ ಸಜೆ ವಿಧಿಸಿದೆ.

ಅಲ್ಲದೆ ತಪ್ಪಿತಸ್ಥನಿಗೆ ೫೦೦೦ ರೂ ದಂಡವನ್ನು ಕೂಡ ನ್ಯಾಯಾಲಯ ವಿಧಿಸಿದೆ. ಗುಡಿಯಟ್ಟಮ್ ನ ಪಾಂಡಿಯನಗರದ ಕುಮಾರ್ ಅಲಿಯಾಸ್ ಕುಮಾರ್ ಗುರುಕುಲ್ ಅವರನ್ನು ಅಪಹರಣ, ಲೈಂಗಿಕ ಕಿರುಕುಳ, ಕೊಲೆ ಹಾಗು ಸಾಕ್ಷ್ಯಗಳ ನಾಶದ ಆರೋಪದ ಮೇಲೆ ತಪ್ಪಿತಸ್ಥ ಎಂದು ನ್ಯಾಯಮೂರ್ತಿ ಎ ನಜೀರ್ ಅಹ್ಮದ್ ತೀರ್ಪು ನೀಡಿದ್ದಾರೆ. ಕೊಲೆಯಾದ ಸಂತ್ರಸ್ತೆ ಐದು ವರ್ಷದ ಬಾಲಕಿ ಲಕ್ಷ್ಮಿ (ಹೆಸರು ಬದಲಿಸಲಾಗಿದೆ) ಪಾಂಡಿಯನಗರದ ಅಣ್ಣೈ ಇಂದಿರಾಗಾಂಧಿ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿದ್ದಳು.

ಸೆಪ್ಟಂಬರ್ ೧೯ ೨೦೧೧ ರಂದು ಮಧ್ಯಾಹ್ನದ ಊಟದ ವಿರಾಮದ ನಂತರ ಬಾಲಕಿ ಕಾಣೆಯಾಗಿದ್ದಳು. ಗುಡಿಯಟ್ಟಮ್ ಪೊಲೀಸ್ ಠಾಣೆಯಲ್ಲಿ ಬಾಲಕಿಯ ತಂದೆ, ಮಗಳು ಕಾಣೆಯಾಗಿರುವುದರ ಬಗ್ಗೆ ದೂರು ನೀಡಿದ್ದರು. ಬಾಲಕಿ ಕಾಣೆಯಾದ ಎರಡು ದಿನದ ನಂತರ ಸೆಪ್ಟಂಬರ್ ೨೧ರಂದು ಕುಮಾರ್ ಮನೆಯ ಹತ್ತಿರ ಬಾಲಕಿಯ ದೇಹ ಪತ್ತೆಯಾಗಿತ್ತು.

ಬಾಲಕಿಯ ಚಪ್ಪಲಿ ಮತ್ತು ಬಳೆಗಳನ್ನು ಅರ್ಚಕನ ಮನೆಯಿಂದ ಪೊಲೀಸರು ವಶಪಡಿಸಿಕೊಂಡು ವಿಚಾರಣೆ ನಡೆಸಿದ ಮೇಲೆ ಅರ್ಚಕ ಕುಮಾರ್ ತಪ್ಪೊಪ್ಪಿಕೊಂಡಿದ್ದ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.