ಗೋವಾದಲ್ಲಿ ನೌಕಾದಳದ ಪರಿವೀಕ್ಷಣಾ ವಿಮಾನ ಪತನ; ಇಬ್ಬರು ಕಾಣೆ
ಗೋವಾದ ನೈರುತ್ಯ ಭಾಗಕ್ಕೆ ೨೫ ನಾಟಿಕಲ್ ಮೈಲಿಗಳ ದೂರದಲ್ಲಿ ಭಾರತೀಯ ನೌಕಾದಳದ ಪರೀವೀಕ್ಷಣಾ ವಿಮಾನವೊಂದು ಪತನವಾಗಿರುವ ಹಿನ್ನಲೆಯಲ್ಲಿ,

ಪಣಜಿ: ಗೋವಾದ ನೈರುತ್ಯ ಭಾಗಕ್ಕೆ ೨೫ ನಾಟಿಕಲ್ ಮೈಲಿಗಳ ದೂರದಲ್ಲಿ ಭಾರತೀಯ ನೌಕಾದಳದ ಪರೀವೀಕ್ಷಣಾ ವಿಮಾನವೊಂದು ಪತನವಾಗಿರುವ ಹಿನ್ನಲೆಯಲ್ಲಿ, ವಿಮಾನದಲ್ಲಿದ್ದ ಇಬ್ಬರು ನೌಕಾ ಅಧಿಕಾರಿಗಳು ಕಾಣೆಯಾಗಿದ್ದಾರೆ.
ಕಡಲತಡಿಯ ಡಾರ್ನಿಯರ್ ಪರಿವೀಕ್ಷಣಾ ವಿಮಾನ ದಿನನಿತ್ಯದಂತೆ ತರಬೇತು ಹಾರಾಟದಲ್ಲಿರಬೇಕಾದರೆ ನೆನ್ನೆ ರಾತ್ರಿ ಸುಮಾರು ೧೧ ಘಂಟೆಗೆ ಪತನವಾಗಿ, ವಿಮಾನದಲ್ಲಿದ್ದ ಇಬ್ಬರು ನೌಕಾ ಅಧಿಕಾರಿಗಳು ಕಾಣೆಯಾಗಿದ್ದಾರೆ ಎಂದು ನೌಕಾ ಮೂಲಗಳು ತಿಳಿಸಿವೆ. ವಿಮಾನ ಪತನವಾದ ಹಿನ್ನಲೆಯಲ್ಲಿ ರಕ್ಷಣೆಗಾಗಿ ಶೋಧ ಕಾರ್ಯಾಚರಣೆ ಪ್ರಾರಂಭವಾಗಿದೆ ಎಂದು ಕೂಡ ಅವರು ತಿಳಿಸಿದ್ದಾರೆ.
"ಬದುಕುಳಿದ ಒಬ್ಬರನ್ನು ರಕ್ಷಿಸಲಾಗಿದೆ. ವಿಮಾದಲ್ಲಿದ್ದ ಪೈಲಟ್ ಮತ್ತು ಮತ್ತೊಬ್ಬರ ರಕ್ಷಣೆಗೆ ಶೋಧ ನಡೆದಿದೆ" ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


