ಪ್ರಧಾನ ಸುದ್ದಿ

ಪಾಕಿಸ್ತಾನ ಧ್ವಜಾರೋಹಣ ಆರೋಪ; ಅಂದ್ರಾಬಿ ವಿರುದ್ಧ ಪ್ರಕರಣ

ಪಾಕಿಸ್ತಾನಿ ರಾಷ್ಟ್ರೀಯ ದಿನಾಚರಣೆಯಾದ ಸೋಮವಾರ ಪಾಕಿಸ್ತಾನದ ಧ್ವಜಾರೋಹಣ ಮಾಡಿದ ಆರೋಪದ ಮೇಲೆ ದುಖ್ತರನ್-ಎ-ಮಿಲ್ಲತ್

ಪಾಕಿಸ್ತಾನ ಧ್ವಜಾರೋಹಣ ಆರೋಪ; ಅಂದ್ರಾಬಿ ವಿರುದ್ಧ ಪ್ರಕರಣ
ಪಾಕಿಸ್ತಾನದ ಧ್ವಜ
Published On :

ಶ್ರೀನಗರ: ಪಾಕಿಸ್ತಾನಿ ರಾಷ್ಟ್ರೀಯ ದಿನಾಚರಣೆಯಾದ ಸೋಮವಾರ ಪಾಕಿಸ್ತಾನದ ಧ್ವಜಾರೋಹಣ ಮಾಡಿದ ಆರೋಪದ ಮೇಲೆ ದುಖ್ತರನ್-ಎ-ಮಿಲ್ಲತ್ ಅಧ್ಯಕ್ಷ ಆಸಿಯಾ ಅಂದ್ರಾಬಿ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಷೇಧ ಕಾಯ್ದೆಯಡಿ (ಯುಎಪಿಎ) ಪ್ರಕರಣ ದಾಖಲಿಸಲಾಗಿದೆ.

"ಕಾನೂನುಬಾಹಿರ ಚಟುವಟಿಕೆಗಳ ನಿಷೇಧ ಕಾಯ್ದೆಯ ಸೆಕ್ಷನ್ ೧೩ರ ಅಡಿ ನೌಹಟ್ಟ ಪೊಲೀಸ್ ಠಾಣೆಯಲ್ಲಿ ಅಂದ್ರಾಬಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪ್ರತ್ಯೇಕವಾದಿ ನಾಯಕ ಮಂಗಳವಾರ ಪಾಕಿಸ್ತಾನಿ ಧ್ವಜ ಹಾರಿಸಿದ ಆರೋಪದ ಮೇಲೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯೇಕವಾದಿ ನಾಯಕನನ್ನು ಬಂಧಿಸಲಾಗುವುದೆ ಎಂಬ ಪ್ರಶ್ನೆಗೆ "ಕಾನೂನಿನ ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದಿದ್ದಾರೆ.

ಮಾರ್ಚ್ ೨೩ರಂದು ಪಾಕಿಸ್ತಾನ ಧ್ವಜ ಹಾಸಿಸಿದ್ದಲ್ಲದೆ ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಹಾಡಿದ್ದಾರೆ ಎಂಬ ಸುದ್ದಿ ವರದಿಯ ಹಿನ್ನಲೆಯಲ್ಲಿ ವಿವಾದ ಭುಗಿಲೆದ್ದಿತ್ತು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.