ಸಿಂಗಪುರದ ಮೊದಲ ಪ್ರಧಾನಿ ಲೀ ಕೌನ್ ಯು ನಿಧನ
ಸಿಂಗಪುರದ ಸಂಸ್ಥಾಪಕ ಪಿತಾಮಹ ಹಾಗೂ ಮೊದಲ ಪ್ರಧಾನ ಮಂತ್ರಿ ಲೀ ಕೌನ್ ಯು ತೀವ್ರ ನ್ಯುಮೋನಿಯಾದಿಂದ....

ಸಿಂಗಪುರ: ಸಿಂಗಪುರದ ಸಂಸ್ಥಾಪಕ ಪಿತಾಮಹ ಹಾಗೂ ಮೊದಲ ಪ್ರಧಾನ ಮಂತ್ರಿ ಲೀ ಕೌನ್ ಯು ತೀವ್ರ ನ್ಯುಮೋನಿಯಾದಿಂದ ೯೧ನೆ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ.
ಫೆಬ್ರವರಿ ೫ ರಿಂದ ಸಿಂಗಪುರ ಜನರಲ್ ಆಸ್ಪತ್ರೆಯಲ್ಲಿ ತೀವ್ರ ನ್ಯುಮೋನಿಯಾದಿಂದ ಲೀ ದಾಖಲಾಗಿದ್ದರು.
ಪ್ರಧಾನಮಂತ್ರಿ ಕಾರ್ಯಾಲಯ ನೀಡಿರುವ ಅಧಿಕೃತ ಹೇಳಿಕೆಯಲ್ಲಿ ಸಿಂಗಪುರ ಜನರಲ್ ಆಸ್ಪತ್ರೆಯಲ್ಲಿ ಸಮಯ ೩.೧೮ಕ್ಕೆ(ಪ್ರಾದೇಶಿಕ ಸಮಯ) ಲೀ ಅವರು ಶಾಂತಿಯುತವಾಗಿ ನಮ್ಮನ್ನಗಲಿದ್ದಾರೆ ಎಂದು ಸ್ಟ್ರೇಟ್ಸ್ ಟೈಮ್ಸ್ ವರದಿ ಮಾಡಿದೆ.
ಸಿಂಗಪುರದ ಸಂಸ್ಥಾಪಕ ಪಿತಾಮಹ ಎಂದೇ ಹೆಸರಾದ ಲೀ ನಗರವನ್ನು ೩ ದಶಕಗಳಲ್ಲಿ ಆರ್ಥಿಕತೆಯ ಅಧಿಕಾರತಾಣವಾಗಿ ಪರಿವರ್ತಿಸಿದ ಹೆಗ್ಗಳಿಕೆ ಅವರದ್ದು. ೩೧ ವರ್ಷ ಆಡಳಿತ ನಡೆಸಿದ ಮೇಲೆ ೧೯೯೦ರಲ್ಲಿ ಪ್ರಧಾನಮಂತ್ರಿ ಹುದ್ದೆ ತೊರೆದಿದ್ದರು.
ಲೀ ಅವರು ತಮ್ಮ ಇಬ್ಬರು ಗಂಡು ಮಕ್ಕಳಾದ ಸದ್ಯದ ಸಿಂಗಾಪುರ ಪ್ರಧಾನಿ ಲೀ ಸೀನ್ ಲೂಂಗ್(೬೩) ಮತ್ತು ಲೀ ಸೀನ್ ಯಾಂಗ್(೫೭) ಮಗಳು ಲೀ ವಿ ಲಿಂಗ್(೬೦) ಹಾಗು ಏಳು ಜನ ಮೊಮ್ಮಕ್ಕಳು ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ. ಅವರ ಪತ್ನಿ ೮೯ನೆ ವಯಸ್ಸಿನಲ್ಲಿ ೨೦೧೦ರಲ್ಲಿ ಸಾವನ್ನಪ್ಪಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


