ಪ್ರಧಾನ ಸುದ್ದಿ

ಡಿಕೆ ರವಿ ಪ್ರಕರಣ: ಸಿಐಡಿ ಐಜಿಪಿ ಪ್ರಣಬ್‌ ಮೊಹಾಂತಿ ದಿಢೀರ್‌ ವರ್ಗ

ಡಿಕೆ ರವಿ ಪ್ರಕರಣ: ಸಿಐಡಿ ಐಜಿಪಿ ಪ್ರಣಬ್‌ ಮೊಹಾಂತಿ ದಿಢೀರ್‌ ವರ್ಗ
ಪ್ರಣಬ್‌ ಮೊಹಾಂತಿ
Published On :
ಬೆಂಗಳೂರು: ದಕ್ಷ ಐಎಎಸ್ ಅಧಿಕಾರಿ ಡಿಕೆ ರವಿ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ನಿರಾಕರಿಸಿ ಸಿಐಡಿಗೆ ಒಪ್ಪಿಸಿರುವ ರಾಜ್ಯ ಸರ್ಕಾರ, ಇದೀಗ ಸಿಐಡಿ ಐಜಿಪಿ ಪ್ರಣಬ್‌ ಮೊಹಾಂತಿ ಅವರನ್ನು ದಿಢೀರ್‌ ವರ್ಗಾವಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ.

ರವಿ ನಿಗೂಢ ಸಾವಿನ ಕುರಿತು ಸಿಐಡಿ ತನಿಖೆ ಆರಂಭಿಸಿರುವ ಬೆನ್ನಲ್ಲೆ, ದಕ್ಷ ಅಧಿಕಾರಿಯೆಂದು ಹೆಸರು ಪಡೆದಿರುವ ಪ್ರಣಬ್‌ ಮೊಹಾಂತಿ ಅವರನ್ನು ಸಿಐಡಿಯಿಂದ ವರ್ಗಾಯಿಸಿ ಆದೇಶ ಹೊರಡಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸಿ.ಹೆಚ್‌. ಪ್ರತಾಪ್‌ ರೆಡ್ಡಿ ಅವರು ನೂತನ ಸಿಐಡಿ ಐಜಿಪಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಮೊಹಾಂತಿ ಅವರಿಗೆ ಲೋಕಾಯುಕ್ತ ಐ.ಜಿ.ಪಿ. ಹೊಣೆ ವಹಿಸಲಾಗಿದೆ.
ರವಿ ಪ್ರಕರಣದ ತನಿಖೆ ಆರಂಭಿಸಿರುವ ಡಿಸಿಪಿ ರೋಹಿಣಿ ಕಟೋಚ್ ನೇತೃತ್ವದ ತಂಡ, ಘಟನೆ ನಡೆದ ದಿನದ ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲದೆ ಈ ಸಂಬಂಧ ಇಂದು ರವಿ ಅವರ ಮಾವ ಹನುಮಂತರಾಯಪ್ಪ ಅವರನ್ನು ವಿಚಾರಣೆ ನಡೆಸಿದ್ದಾರೆ. ಜೊತೆಗೆ ರವಿ ಅವರ ರೂಮ್, ಕೋರಮಂಗಲದಲ್ಲಿರುವ ಕಚೇರಿ ತಪಾಸಣೆ ನಡೆಸಿದ್ದು,ಈ ಎಲ್ಲಾ ಮಾಹಿತಿಯನ್ನು ಸಿಐಡಿಗೆ ಹಸ್ತಾಂತರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.