ರಕ್ಷಣಾ ಬಜೆಟ್ ಕೊಳ್ಳೆ ಹೊಡೆದ ಯುಪಿಎ ಸರ್ಕಾರ; ಪರ್ರಿಕರ್ ಆರೋಪ; ಕಾಂಗ್ರೆಸ್ ಕೆಂಡಾಮಂಡಲ
ಎನ್ ಡಿ ಎ ಆಡಳಿತಕ್ಕೂ ಮುಂಚೆ ಭದ್ರತಾ ಸಚಿವಾಲಯದ ಬಜೆಟ್ಟಿನ ೩ ಲಕ್ಷ ಕೋಟಿ ರುಪಾಯಿಯ ೨೫% ಜೇಬಿಗೆ ಹೋಗಿದೆ

ಪಣಜಿ: ಎನ್ ಡಿ ಎ ಆಡಳಿತಕ್ಕೂ ಮುಂಚೆ ಭದ್ರತಾ ಸಚಿವಾಲಯದ ಬಜೆಟ್ಟಿನ ೩ ಲಕ್ಷ ಕೋಟಿ ರುಪಾಯಿಯ ೨೫% ಜೇಬಿಗೆ ಹೋಗಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ದಕ್ಷಿಣ ಗೋವಾದ ಚುನಾವಣಾ ಪ್ರಚಾರ ವೇಳೆಯಲ್ಲಿ ತಿಳಿಸಿದ್ದಾರೆ ಎಂದು ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ಆ ಆರೋಪದ ಹೇಳಿಕೆಗಳನ್ನು ತೀಕ್ಷ್ಣವಾಗಿ ಟೀಕಿಸಿದೆ.
ಕಾಂಗ್ರೆಸ್ ವಕ್ತಾರ ದುರ್ಗಾದಾಸ್ ಕಾಮತ್ ನೀಡಿರುವ ಹೇಳಿಕೆಯಲ್ಲಿ "ಕಾಂಗ್ರೆಸ್ ಆಡಳಿತದ ಸಮಯದಲ್ಲಿ ಕಳ್ಳತನವಾಗಿದ್ದಾರೆ, ತನಿಖೆ ನಡೆಸುವುದರಿಂದ ರಕ್ಷಣಾ ಸಚಿವರನ್ನು ತಡೆಯುತ್ತಿರುವವರು ಯಾರು? ಪ್ರಚಾರಕ್ಕೋಸ್ಕರ ಎಷ್ಟು ಕೆಳಕ್ಕೆ ಬೇಕಾದರೂ ಇಳಿಯುವ ಮನಸ್ಥಿತಿ ಇದು" ಎಂದಿದ್ದಾರೆ.
ಪಣಜಿಯಿಂದ ೯೦ ಕಿಮೀ ದೂರದ ಖೋಲಾ ಗ್ರಾಮದ ಚುನಾವಾಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದ ಪರ್ರಿಕರ್ ತಮ್ಮ ಹಿಂದಿನ ಸರ್ಕಾರಗಳು ರಕ್ಷಣಾ ಬಜೆಟ್ ನ ೨೫% ಹಣವನ್ನು ಕೊಳ್ಳೆ ಹೊಡಿದಿದ್ದಾರೆ ಎಂದು ಆರೋಪಿಸಿದ್ದಾಗಿ ಪ್ರಾದೇಶಿಕ ಪತ್ರಿಕೆಯೊಂದು ವರದಿ ಮಾಡಿತ್ತು.
"ರಕ್ಷಣಾ ಬಜೆಟ್ ೨.೪೬ ಲಕ್ಷ ಕೋಟಿ ರೂ ಮತ್ತು ಎಲ್ಲವನ್ನು ಪರಿಗಣಿಸಿದರೆ ಇದು ೩ ಲಕ್ಷ ಕೋಟಿ ಆಗುತ್ತದೆ. ಮತ್ತು ಅದರಲ್ಲಿ ಕಳ್ಳತನ ಕೂಡ ಆಗುತ್ತದೆ" ಎಂದಿದ್ದ ಪರ್ರಿಕರ್ "ರಾಜ್ಯಸಭೆಯಲ್ಲಿ ವಿಪಕ್ಷದ ಒಬ್ಬ ಸದಸ್ಯರು ಈ ಬಜೆಟ್ನಲ್ಲಿ ಅಷ್ಟೊಂದು ಕೆಲಸವನ್ನು ಮಾಡಲು ಹೇಗೆ ಸಾಧ್ಯ ಎಂದು ಕೇಳಿದ್ದರು, ಅದಕ್ಕೆ ನಾನು ಹೇಳಿದ್ದೆ: ನೀವು ನಿಮ್ಮ ವೇಳೆಯಲ್ಲಿ ಮಾಡಿದ ಕೆಲಸಕ್ಕಿಂದ ೨೫% ಇಂದ ೩೦% ಹೆಚ್ಚಿನ ಕೆಲಸ ಮಾಡಬಹುದು. ಇದು ಏಕೆಂದರೆ ನಿಮ್ಮ ಆಡಳಿತ ಸಮಯದಲ್ಲಿ ಮಧ್ಯದಲ್ಲಿದ್ದ ಕೆಲವರು ೨೫% ಕ್ಕೂ ಹೆಚ್ಚು ಹಣವನ್ನು ಗುಳುಂ ಮಾಡಿದ್ದಾರೆ" ಎಂದಿದ್ದರು ಪರ್ರಿಕರ್ ಎಂದು ವರದಿ ಮಾಡಲಾಗಿದೆ. ಆದರೆ ಯಾರ ಆಡಳಿತದಲ್ಲಿ ಈ ಸೋರಿಕೆ ನಡೆದಿದೆ ಎಂಬುದನ್ನು ಪರ್ರಿಕರ್ ಬಹಿರಂಗಗೊಳಿಸಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


