ತಮಿಳು ಟಿವಿ ವಾಹಿನಿ ಕಚೇರಿಗೆ ಕಚ್ಚಾ ಬಾಂಬ್ ಎಸೆತ
ಚನ್ನೈನ ಪ್ರಖ್ಯಾತ ಟಿವಿ ವಾಹಿನಿಯೊಂದರ ಕಚೇರಿಗೆ ಪತ್ತೆ ಹಚ್ಚದ ವ್ಯಕ್ತಿಗಳು ಕಚ್ಚಾ ಬಾಂಬ್ ಗಳನ್ನು ಎಸೆದ ಘಟನೆ ನಡೆದಿದೆ

ಚೆನ್ನೈ: ಚನ್ನೈನ ಪ್ರಖ್ಯಾತ ಟಿವಿ ವಾಹಿನಿಯೊಂದರ ಕಚೇರಿಗೆ ಪತ್ತೆ ಹಚ್ಚದ ವ್ಯಕ್ತಿಗಳು ಕಚ್ಚಾ ಬಾಂಬ್ ಗಳನ್ನು ಎಸೆದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ.
ಇದು ಮುಂಜಾನೆ ನಡೆದ ಘಟನೆಯಲ್ಲಿ ಬೈಕುಗಳಲ್ಲಿ ಬಂದ ನಾಲ್ಕು ಜನ ಯುವಕರು ಊಟದ ಡಬ್ಬಿಯಲ್ಲಿ ಕಚ್ಚಾ ಬಾಂಬುಗಳನ್ನಿಟ್ಟು ಕಚೇರಿಯೊಳಗೆ ಎಸೆದಿದ್ದಾರೆ.
ಪೊಲೀಸರು ಸುಳುಹುಗಳ ಬೆನ್ನುಹತ್ತಿದ್ದು, ಇನ್ನು ಯಾರನ್ನು ಬಂಧಿಸಲಾಗಿಲ್ಲ.
ಈ ಘಟನೆಯಿಂದ ಯಾರಿಗೂ ಹಾನಿಯಾಗಿಲ್ಲ ಹಾಗೆಯೇ ಆಸ್ತಿ-ಪಾಸ್ತಿಗೂ ಹೆಚ್ಚಿನ ತೊಂದರೆಯಾಗಿಲ್ಲ ಎಂದು ಪುಥಿಯ ಥಲೈಮುರೈ ಟಿವಿ ವಾಹಿನಿಯ ಪತ್ರಕರ್ತರು ತಿಳಿಸಿದ್ದಾರೆ. ಈ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಿಂದು ಮುನ್ನಾನಿ ಎಂಬ ಹಿಂದು ಸಂಘಟನೆ ಈ ವಾಹಿನಿ ನಡೆಸುತ್ತಿದ್ದ ವಿವಾದಾತ್ಮಕ ಕಾರ್ಯಕರ 'ತಾಳಿ'ಯನ್ನು ಭಾನುವಾರ ವಿರೋಧಿಸಿ ಪತ್ರಕರ್ತ ಛಾಯಾಗ್ರಾಹಕನೊಬ್ಬನ ಮೇಲೆ ಹಲ್ಲೆ ಮಾಡಿದ್ದರಿಂದ ವಾಹಿನಿ ಈ ಕಾರ್ಯಕ್ರಮವನ್ನು ಹಿಂದಕ್ಕೆ ತೆಗೆದುಕೊಂಡಿತ್ತು. ಈ ಹಿನ್ನಲೆಯಲ್ಲೇ ಈ ಘಟನೆ ನಡೆದಿದ್ದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


