ಪ್ರಧಾನ ಸುದ್ದಿ

ತರಂಗಾಂತರಗಳ ಹರಾಜು ಶುರು; ಸರಕಾರಕ್ಕೆ ೮೦ ಸಾವಿರ ಕೋಟಿ ಆದಾಯ ನಿರೀಕ್ಷೆ

ಬಹುನಿರೀಕ್ಷಿತ ಮೊಬೈಲ್ ತರಂಗಾಂತರ ಹರಾಜು ಪ್ರಕ್ರಿಯೆ ಇಂದು ಪ್ರಾರಂಭವಾಗಿದೆ. ನಾಲ್ಕು ಬ್ಯಾಂಡುಗಳ ಈ ಹರಾಜು ಪ್ರಕ್ರಿಯೆಯಲ್ಲಿ ೮ ಸಂಸ್ಥೆಗಳು ಭಾಗಿಯಾಗಿವೆ.

ತರಂಗಾಂತರಗಳ ಹರಾಜು ಶುರು; ಸರಕಾರಕ್ಕೆ ೮೦ ಸಾವಿರ ಕೋಟಿ ಆದಾಯ ನಿರೀಕ್ಷೆ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಬಹುನಿರೀಕ್ಷಿತ ಮೊಬೈಲ್ ತರಂಗಾಂತರ ಹರಾಜು ಪ್ರಕ್ರಿಯೆ ಇಂದು ಪ್ರಾರಂಭವಾಗಿದೆ. ನಾಲ್ಕು ಬ್ಯಾಂಡುಗಳ ಈ ಹರಾಜು ಪ್ರಕ್ರಿಯೆಯಲ್ಲಿ ೮ ಸಂಸ್ಥೆಗಳು ಭಾಗಿಯಾಗಿವೆ.

೨ಜಿ ಮತ್ತು ೩ಜಿ ತರಂಗಾಂತರಗಳ ಅತಿ ದೊಡ್ಡ ಹರಾಜು ಪ್ರಕ್ರಿಯೆ ಇದು ಎನ್ನಲಾಗಿದೆ. ಇದು ಸರ್ಕಾರದ ಬೊಕ್ಕಸೆಗೆ ೮೨ ಸಾವಿರ ಕೋಟಿ ಆದಾಯ ಗಳಿಸಿಕೊಡಲಿದೆ ಎಂದು ಅಂದಾಜಿಸಲಾಗಿದೆ.  

೯೦೦ ಮೆಗಾ ಹರ್ಟ್ಜ್ ಬ್ಯಾಂಡ್, ೧೮೦೦ ಮೆಗಾ ಹರ್ಟ್ಜ್, ಮತ್ತು ೮೦೦ ಮೆಗಾ ಹರ್ಟ್ಜ್ ನ ಮೂರು ಬ್ಯಾಂಡುಗಳಲ್ಲಿ ಒಟ್ಟು ೩೮೦.೭೫ ಮೆಗಾ ಹರ್ಟ್ಜ್ ತರಂಗಾಂತರವನ್ನು ಅಲ್ಲದೆ ೨೧೦೦ ಮೆಗಾ ಹರ್ಟ್ಜ್ ಬ್ಯಾಂಡ್ ನಲ್ಲಿ ೫ ಮೆಗಾ ಹರ್ಟ್ಜ್ ತರಂಗಾಂತರವನ್ನು ಮಾರಾಟಕ್ಕೆ  ಇಡಲಾಗಿದೆ. ಇದು ದೇಶದ ೨೨ ಟೆಲಿಕಾಂ ಪ್ರದೇಶಗಳ ಪೈಕಿ ೧೭ ಪ್ರದೇಶಗಳ ವ್ಯಾಪ್ತಿಯನ್ನು ಹೊಂದಿದೆ.

ಸದ್ಯಕ್ಕೆ ಹರಾಜಾಗುತ್ತಿರುವ ಈ ತರಂಗಾಂತರಗಳ ಹೆಚ್ಚಿನದನ್ನು ಏರ್ ಟೆಲ್, ವೊಡಾಫೋನ್, ಐಡಿಯಾ ಸೆಲ್ಲ್ಯುಲಾರ್ ಮತ್ತು ರಿಲಾಯೆನ್ಸ್ ಟೆಲಿಕಾಮ್ ಹೊಂದಿದ್ದು, ಇದರ ಪರವಾನಗಿ ೨೦೧೫-೧೬ ಕ್ಕೆ ಕೊನೆಗೊಳ್ಳಲಿದೆ. ತಮ್ಮ ಸೇವೆಯನ್ನು ಮುಂದುವರೆಸಲು ಈ ಸಂಸ್ಥೆಗಳು ಕೂಡ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.