ಪ್ರಧಾನ ಸುದ್ದಿ

ಐಎಂಎಫ್ ಸಾಲ ತೀರಿಸಲು ವಿಫಲವಾದ ಮೊದಲ ಅಭಿವೃದ್ಧಿ ಹೊಂದಿದ ರಾಷ್ಟ್ರ ಗ್ರೀಸ್

ಅಂತರಾಷ್ಟ್ರೀಯ ಧನಸಹಾಯ ನಿಧಿ (ಐಎಂಎಫ್) ಸಂಸ್ಥೆಗೆ ಸಾಲ ತೀರಿಸಲು ಗ್ರೀಸ್ ದೇಶಕ್ಕೆ ನೆನ್ನೆ ಕೊನೆಯ ದಿನವಾಗಿದ್ದು, ಹಣ ಹಿಂದಿರುಗಿಸಲು ಗ್ರೀಸ್

ಐಎಂಎಫ್ ಸಾಲ ತೀರಿಸಲು ವಿಫಲವಾದ ಮೊದಲ ಅಭಿವೃದ್ಧಿ ಹೊಂದಿದ ರಾಷ್ಟ್ರ ಗ್ರೀಸ್
ಸಾಂದರ್ಭಿಕ ಚಿತ್ರ
Published On :

ವಾಶಿಂಗ್ಟನ್: ಅಂತರಾಷ್ಟ್ರೀಯ ಧನಸಹಾಯ ನಿಧಿ (ಐಎಂಎಫ್) ಸಂಸ್ಥೆಗೆ ಸಾಲ ತೀರಿಸಲು ಗ್ರೀಸ್ ದೇಶಕ್ಕೆ ನೆನ್ನೆ ಕೊನೆಯ ದಿನವಾಗಿದ್ದು, ಹಣ ಹಿಂದಿರುಗಿಸಲು ಗ್ರೀಸ್ ವಿಫಲವಾಗಿದ್ದರಿಂದ, ಸಾಲ ತೀರಿಸದ ಮೊದಲ ಅಭಿವೃದ್ಧಿ ಹೊಂದಿದ ದೇಶ ಎನಿಸಿಕೊಂಡಿದೆ. ಗ್ರೀಸ್ ಐಎಂಎಫ್ ಸಂಸ್ಥೆಗೆ ೧.೫ ಬಿಲಿಯನ್ ಯೂರೋ ಸಾಲ ಹಿಂದಿದಿರುಗಿಸಬೇಕಿತ್ತು.

"ಐಎಂಎಫ್ ಗೆ ಗ್ರೀಸ್ ಹಿಂದಿರುಗಿಸಬೇಕಿದ್ದ ಸಾಲದ ಮೊತ್ತವನ್ನು ನೀಡಲು ವಿಫಲವಾಗಿದೆ ಎಂದು ಧೃಢೀಕರಿಸುತ್ತೇನೆ" ಎಂದು ಐಎಂಎಫ್ ವಕ್ತಾರ ಗೆರ್ರಿ ರೈಸ್ ತಿಳಿಸಿದ್ದಾರೆ.

"ನಾವು ನಮ್ಮ ಕಾರ್ಯಕಾರಿಣಿ ಸಮಿತಿಗೆ ಈ ವಿಷಯ ತಿಳಿಸಿದ್ದು, ಅವರು ಸಾಲ ತೀರುಸುವವರೆಗೆ ಗ್ರೀಸ್ ದೇಶಕ್ಕೆ ಧನಸಹಾಯ ಸಾಧ್ಯವಾಗುವುದಿಲ್ಲ" ಎಂದು ಅವರು ತಿಳಿಸಿದ್ದಾರೆ.

ಯೂರೋಪಿಯನ್ ಯೂನಿಯನ್ ಜೊತೆ ಬೇಲ್-ಔಟ್ ಮಾಡಲು ಸುಧೀರ್ಘ ಮಾತುಕತೆ ನಡೆಸಿದರೂ ಅದ್ಯಾವುದೂ ಸಫಲವಾಗದೆ ಹೋಗಿದೆ. ಐಎಮ್ಎಫ್ ಸಂಸ್ಥೆಗೆ ಕೂಡ ಗಡುವನ್ನು ವಿಸ್ತರಿಸಲು ಗ್ರೀಸ್ ಮಾಡಿದ ಮನವಿ ಕೂಡ ತಿರಸ್ಕೃತವಾಗಿದೆ.

ಅವರು ಮನವಿ ಮಾಡಿದ್ದರು ಆದರೆ ಸಮಿತಿ ಒಪ್ಪಿಕೊಳ್ಳಲಿಲ ಎಂದು ರೈಸ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.