ಅಮರನಾಥ ಯಾತ್ರೆ: ಭದ್ರತೆಯನ್ನು ಪರಿಶೀಲಿಸಲಿರುವ ರಾಜನಾಥ್ ಸಿಂಗ್
ಅಮರನಾಥ ಯಾತ್ರೆಗೆ ಮಾಡಲಾಗಿರುವ ಭದ್ರತಾ ಸೌಕರ್ಯವನ್ನು ಪರಿಶೀಲಿಸಲು ಹಾಗೂ ಹಿಮಾಯದ ಶಿವ ಗುಹಾ ದೇವಾಲಯಲ್ಲಿ ಪ್ರಾರ್ಥನೆ ಸಲ್ಲಿಸಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್

ಶ್ರೀನಗರ: ಅಮರನಾಥ ಯಾತ್ರೆಗೆ ಮಾಡಲಾಗಿರುವ ಭದ್ರತಾ ಸೌಕರ್ಯವನ್ನು ಪರಿಶೀಲಿಸಲು ಹಾಗೂ ಹಿಮಾಯದ ಶಿವ ಗುಹಾ ದೇವಾಲಯಲ್ಲಿ ಪ್ರಾರ್ಥನೆ ಸಲ್ಲಿಸಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಬುಧವಾರ ಶ್ರೀನಗರಕ್ಕೆ ೨ ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಅಮರನಾಥ ಯಾತ್ರೆ ಜುಲೈ ೨ ರಿಂದ ಪ್ರಾರಂಭವಾಗಲಿದೆ.
ಮುಖ್ಯಮಂತ್ರಿ ಮುಫ್ತಿ ಮೊಹಮದ್ ಸಯ್ಯದ್ ಮತ್ತು ರಾಜ್ಯದ ಹಿರಿಯ ಅಧಿಕಾರಿಗಳೊಂದಿಗೆ ಗೃಹಸಚಿವರು ಈ ವರ್ಷದ ಅಮರನಾಥ ಯಾತ್ರೆಯ ಭದ್ರತಾ ಸೌಕರ್ಯಗಳನ್ನು ಪರಿಶೀಲಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
"ಅವರು ಜುಲೈ ೨ ರಂದು ಪವಿತ್ರ ಅಮರನಾಥ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಲಿರುವ ಮೊದಲ ಸರಣಿಯ ಭಕ್ತರಲ್ಲಿ ಒಬ್ಬರಾಗಿರುತ್ತಾರೆ" ಎಂದು ಕೂಡ ಹಿರಿಯ ಸರ್ಕಾರಿ ಅಧಿಕಾರಿ ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಈ ಪವಿತ್ರ ಕ್ಷೇತ್ರದ ಹಿಮಾಲಯ ಗುಹಾ ದೇವಾಲಯದ ತೀರ್ಥಯಾತ್ರೆ ಜುಲೈ ೨ ರಿಂದ ಆಗಸ್ಟ್ ೨೯ರವರೆಗೆ ೫೯ದಿನಗಳ ಕಾಲ ನಡೆಯಲಿದೆ.
ಸಮುದ್ರಮಟ್ಟದಿಮ್ದ ೧೪೫೦೦ ಅಡಿ ಎತ್ತರದಲ್ಲಿರುವ ಈ ಗುಹಾ ದೇವಾಲಯದಲ್ಲಿ ಮಾನ್ಸೂನ್ ವೇಳೆಯಲ್ಲಿ ಹಿಮ ಸ್ವಾಭಾವಿಕವಾಗಿ ಲಿಂಗದ ರೂಪ ತಾಳುತ್ತದೆ. ೩೪ ಕಿಮೀ ಸಾಂಪ್ರದಾಯಿಕ ಫಹಲ್ಗಂ ಮಾರ್ಗ ಮೂಲಕ ಈ ಪವಿತ್ರ ತಾಣಕ್ಕೆ ತೆರಳಲು ನಾಲ್ಕು ದಿನದ ಚಾರಣ ಅಗತ್ಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


