ಉತ್ತರಪ್ರದೇಶ ಮೃತ ಪತ್ರಕರ್ತನ ಕುಟುಂಬಕ್ಕೆ ೩೦ ಲಕ್ಷ ಪರಿಹಾರ
ಕೊಲೆಯಾದ ಉತ್ತರ ಪ್ರದೇಶದ ಪತ್ರಕರ್ತ ಜಾಗೇಂದ್ರ ಸಿಂಗ್ ಅವರ ಕುಟುಂಬಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಸೋಮವಾರ ೩೦ ಲಕ್ಷ ರೂ

ಲಕನೌ: ಕೊಲೆಯಾದ ಉತ್ತರ ಪ್ರದೇಶದ ಪತ್ರಕರ್ತ ಜಾಗೇಂದ್ರ ಸಿಂಗ್ ಅವರ ಕುಟುಂಬಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಸೋಮವಾರ ೩೦ ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.
ಕುಟುಂಬ ಸದಸ್ಯರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಕಳೆದ ವಾರದ ಕೊಲೆಯನ್ನು ವಿವರಿಸಿದ್ದು ರಾಜ್ಯಾದ್ಯಂತ ಜನರನ್ನು ಆಕ್ರೋಶಕ್ಕೆ ಗುರಿ ಮಾಡಿದ್ದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಈ ಘೋಷಣೆ ಮಾಡಿದ್ದಾರೆ.
ತಾನು ಸಾಯುವುದಕ್ಕೂ ಮುಂಚೆ, ಉತ್ತರ ಪ್ರದೇಶದ ಹಿಂದುಳಿದ ಸಮಾಜ ಕಲ್ಯಾಣ ಸಚಿವ ರಾಮ್ ಮೂರ್ತಿ ವರ್ಮಾ ತನ್ನನು ಕೊಲೆ ಮಾಡಲು ಆದೇಶ ನೀಡಿದ್ದರು ಎಂದು ಮೃತ ಪತ್ರಕರ್ತ ಆರೋಪಿಸಿದ್ದರು.
ಸಚಿವರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಐದು ಜನ ಪೊಲೀಸರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಆದರೆ ಬೇರೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಕುಟುಂಬ ವರ್ಗ ದೂರಿದೆ.
ಸಚಿವನನ್ನು ಕೂಡಲೆ ಬಂಧಿಸಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ ಕುಟುಂಬ ಒಂದು ವಾರದವರೆಗೆ ಧರಣಿ ನಡೆಸಿದೆ.
ಆದರೆ ಸಚಿವನನ್ನು ಸಮಾಜವಾದಿ ಪಕ್ಷದ ಹಲವು ಧುರೀಣರು ಬೆಂಬಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


