ಮುಸ್ಲಿಂ ಗುರುಗಳಿಂದ ಯೋಗ ಕಲಿಯಲಿರುವ ಅಮಿತ್ ಷಾ
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಮುಸ್ಲಿಂ ಯೋಗ ಗುರುಗಳಿಂದ ಜೂನ್ ೨೧ರ ಅಂತರಾಷ್ಟ್ರೀಯ ಯೋಗ ದಿನದಂದು ಆಯೋಜಿಸಲಾಗಿರುವ ವಿಷೇಶ ಶಿಬಿರದಲ್ಲಿ

ಪಾಟ್ನಾ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಮುಸ್ಲಿಂ ಯೋಗ ಗುರುಗಳಿಂದ ಜೂನ್ ೨೧ರ ಅಂತರಾಷ್ಟ್ರೀಯ ಯೋಗ ದಿನದಂದು ಆಯೋಜಿಸಲಾಗಿರುವ ವಿಷೇಶ ಶಿಬಿರದಲ್ಲಿ ಯೋಗ ಪಾಠ ಹೇಳಿಸಿಕೊಳ್ಳಲಿದ್ದಾರೆ.
"ಯೋಗ ಗುರುಗಳಾದ ಮೊಹಮ್ಮದ್ ತಮನ್ನ ಮತ್ತು ಅಶೋಕ್ ಸರ್ಕಾರ ಮೊಯ್ನಿಲ್ ಹಕ್ ಮೈದಾನದಲ್ಲಿ ಅಮಿತ್ ಷಾ ಅವರಿಗೆ ಯೋಗ ಕಲಿಸಲಿದ್ದಾರೆ" ಎಂದು ಬಿಹಾರ-ಜಾರ್ಖಂಡದ ಪತಂಜಲಿ ಯೋಗಪೀಠದ ಉಸ್ತುವಾರಿ ಅಜಿತ್ ಕುಮಾರ್ ಮಂಗಳವಾರ ತಿಳಿಸಿದ್ದಾರೆ.
ಬಿಹಾರದ ಕೇಂದ್ರ ಸಚಿವರು ಈ ಯೋಗ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಅವರುಗಳಲ್ಲಿ ರವಿ ಶಂಕರ್ ಪ್ರಸಾದ್, ರಾಜೀವ್ ಪ್ರತಾಪ್ ರೂಡಿ, ರಾಧ ಮೋಹನ್ ಸಿಂಗ್ ಮತ್ತು ರಾಮ್ ಕೃಪಾಲ್ ಯಾದವ್ ಪ್ರಮುಖರು.
ಈ ಯೋಗ ಶಿಬಿರದಲ್ಲಿ ಅಮಿತ್ ಷಾ ಭಾಗವಹಿಸುತ್ತಿರುವುದು ರಾಜಕೀಯ ಬಣ್ಣ ಪಡೆದುಕೊಂಡಿದೆ.
ಬಿಜೆಪಿ ಪಕ್ಷ ಮತ್ತು ನರೇಂದ್ರ ಮೋದಿ ಅವರನ್ನು ಟೀಕಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇವರು ಯೋಗವನ್ನು ಪ್ರಚಾರ ಮತ್ತು ಶೋಕಿಗೆ ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಜೂನ್ ೨೧ರ ಶಿಬಿರವನ್ನು ನಾಟಕ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ದೂರಸಂಪರ್ಕ ಖಾತೆ ಸಚಿವ ರವಿಶಂಕರ್ ಪ್ರಸಾದ್ ಶಾಂತಿಯುತ ಮನಸ್ಸಿಗಾಗಿ ಪ್ರಾಣಾಯಾಮ ಮಾಡುವಂತೆ ನಿತೀಶ್ ಕುಮಾರ್ ಅವರಿಗೆ ಸಲಹೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


