ಪ್ರಧಾನ ಸುದ್ದಿ

ಸಮಾಜವಾದಿ ಪಕ್ಷದ ಶಾಸಕನ ವಿರುದ್ಧ ಬರೆದಿದ್ದಕ್ಕೆ ಪತ್ರಕರ್ತನ ಸಜೀವ ದಹನ

ಸಮಾಜವಾದಿ ಪಕ್ಷದ ಶಾಸಕ ರಾಮಮೂರ್ತಿ ಅವರ ವಿದುದ್ಧ ಸಾಮಾಜಿಕ ಮಾಧ್ಯಮದ ಪತ್ರಕರ್ತ ಜಾಗೇಂದ್ರ ಸಿಂಗ್ ಫೇಸ್ ಬುಕಿನಲ್ಲಿ ಬರೆದ ಎಂಬ ಕಾರಣಕ್ಕೆ ಉತ್ತರ ಪ್ರದೇಶದಲ್ಲಿ

ಸಮಾಜವಾದಿ ಪಕ್ಷದ ಶಾಸಕನ ವಿರುದ್ಧ ಬರೆದಿದ್ದಕ್ಕೆ ಪತ್ರಕರ್ತನ ಸಜೀವ ದಹನ
ಸಾಂದರ್ಭಿಕ ಚಿತ್ರ
Published On :

ಸಮಾಜವಾದಿ ಪಕ್ಷದ ಶಾಸಕ ರಾಮಮೂರ್ತಿ ಅವರ ವಿದುದ್ಧ ಸಾಮಾಜಿಕ ಮಾಧ್ಯಮದ ಪತ್ರಕರ್ತ ಜಾಗೇಂದ್ರ ಸಿಂಗ್ ಫೇಸ್ ಬುಕಿನಲ್ಲಿ ಬರೆದ ಎಂಬ ಕಾರಣಕ್ಕೆ ಉತ್ತರ ಪ್ರದೇಶದ ಶಹಜೆಹನಾಪುರದಲ್ಲಿ ಅವನನ್ನು ಸಜೀವ ದಹನ ಮಾಡಿದ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.

ಶಾಸಕನ ವಿರುದ್ಧ ಫೇಸ್ ಬುಕ್ಕಿನಲ್ಲಿ ಬರೆದದ್ದಲ್ಲದೆ, ದಿನಪತ್ರಿಕೆಯಲ್ಲಿ ಈ ಶಾಸಕದ ಅಕ್ರಮ ಗಣಿಗಾರಿಕೆ ಮತ್ತು ಜಮೀನು ಕಬಳಿಕೆಯ ಬಗ್ಗೆ ಕೂಡ ಬರೆದಿದ್ದ ಎನ್ನಲಾಗಿದೆ.

ಈ ಆರೋಪಗಳು ಶಾಸಕನನ್ನು ಕೆರಳಿಸಿ ಪತ್ರಕರ್ತನ ವಿರುದ್ಧ ಮಿಥ್ಯಾರೋಪಗಳನ್ನು ಸೃಷ್ಟಿಸಿ ಪೊಲೀಸರಿಗೆ ದೂರು ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಕುಟುಂಬದವರು ಹೇಳುವ ಪ್ರಕಾರ ಜಾಗೇಂದ್ರ ಅವರನ್ನು ಬಂಧಿಸಲು ಪೊಲೀಸರು ಬಂದರು ಹಾಗೂ ಜಾಗೇಂದ್ರನಿಗೆ ಬೆಂಕಿ ಹಚ್ಚಿದರು. ಆಸ್ಪತ್ರೆಗೆ ಕೊಂಡೊಯ್ಯುವಾಗ ಅವನು ಮೃತಪಟ್ತ ಎಂದು ಆಪಾದಿಸಿದ್ದಾರೆ.

ಇದನ್ನು ಅಲ್ಲಗೆಳೆದಿರುವ ಪೊಲೀಸರು ನಾವು ಅವರನ್ನು ಬಂದಿಸಲು ಹೋಗಿದ್ದಾಗ ಪತ್ರಕರ್ತ ಆತ್ಮಹತ್ಯೆ ಮಾಡಿಕೊಂಡನು ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.