ಮಣಿಪುರ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ: ಚೀನಾ ಕೈವಾಡ ಶಂಕೆ
ದೇಶದ ಈಶಾನ್ಯ ಭಾಗದಲ್ಲಿ ಭಾರತೀಯ ಭದ್ರತಾ ಪಡೆಗಳ ಮೇಲೆ ಇತ್ತೀಚೆಗೆ ನಡೆದಿರುವ ಉಗ್ರಗಾಮಿ ದಾಳಿಯಲ್ಲಿ ಚೀನದ ಕೈವಾಡ ಇರುವುದನ್ನು ಗುಪ್ತಚರ ಇಲಾಖೆ ಶಂಕಿಸಿದೆ...

ನವದೆಹಲಿ: ದೇಶದ ಈಶಾನ್ಯ ಭಾಗದಲ್ಲಿ ಭಾರತೀಯ ಭದ್ರತಾ ಪಡೆಗಳ ಮೇಲೆ ಇತ್ತೀಚೆಗೆ ನಡೆದಿರುವ ಉಗ್ರಗಾಮಿ ದಾಳಿಯಲ್ಲಿ ಚೀನದ ಕೈವಾಡ ಇರುವುದನ್ನು ಗುಪ್ತಚರ ಇಲಾಖೆ ಶಂಕಿಸಿದೆ.
ಭಾರತದ ಈಶಾನ್ಯ ಭಾಗದಲ್ಲಿ ಉಗ್ರ ಸಂಘಟನೆಗಳನ್ನು ಬೆಂಬಲಿಸುವ ಮೂಲಕ ಅರಾಜಕತೆ, ಅಶಾಂತಿ, ಹಿಂಸೆಯನ್ನು ಭುಗಿಲೇಳಿಸುವ ಸಂಚಿನಲ್ಲಿ ಚೀನ ತೊಡಗಿದೆ ಎಂದು ಗುಪ್ತಚರ ವರದಿ ಹೇಳಿದೆ.
ಮಣಿಪುರದಲ್ಲಿನ ಸೇನಾ ಶಿಬಿರದ ಮೇಲೆ ಇತ್ತೀಚೆಗೆ ಉಗ್ರರು ದಾಳಿ ನಡೆಸಿ 18 ಭಾರತೀಯ ಸೈನಿಕರನ್ನು ಕೊಂದ ಕೆಲವೇ ದಿನಗಳ ಒಳಗೆ ಗುಪ್ತಚರ ದಳವು ಈ ವರದಿಯನ್ನು ನೀಡಿದೆ.ಇದರ ಹೊರತಾಗಿಯೂ ಶಂಕಿತ ನಾಗಾ ಉಗ್ರ ಪಡೆಯಾಗಿರುವ ಎನ್‌ಎಸ್‌ಸಿಎನ್-ಕೆ ಇದರ ಉಗ್ರರು ನಿನ್ನೆ ಭಾನುವಾರ ಅರುಣಾಚಲದಲ್ಲಿನ ಅಸ್ಸಾಂ ರೈಫಲ್ಸ್ ಛಾಯಾ ಸೈನಿಕ ದಳದ ಶಿಬಿರದ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಯಾವುದೇ ಜೀವ ಹಾನಿ ಸಂಭವಿಸಿಲ್ಲ.
ಈ ನಡುವೆ ಕೇಂದ್ರ ಗೃಹ ವ್ಯವಹಾರಗಳ ಸಹಾಯಕ ಸಚಿವ ಕಿರಣ್ ರಿಜಿಜು ಹೇಳಿಕೆಯೊಂದನ್ನು ಹೊರಡಿಸಿ, ಈಶಾನ್ಯ ಭಾಗದಲ್ಲಿ ನಮ್ಮ ಸೈನಿಕರ ಮೇಲೆ ಉಗ್ರರಿಂದ ನಡೆದಿರುವ ದಾಳಿಗಳನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಕೇಂದ್ರ ಮತ್ತು ರಾಜ್ಯ ಪೊಲೀಸರು ಸಮಸ್ಯೆಯನ್ನು ಬಗೆಹರಿಸಲು ಒಟ್ಟಾಗಿ ಕೆಲಸ ಮಾಡಬೇಕಿದೆ. ಈಶಾನ್ಯ ಭಾಗದಲ್ಲಿ ಹೇಗೆ ಶಾಂತಿಯನ್ನು ಪುನಃಸ್ಥಾಪಿಸಬೇಕೆಂಬುದನ್ನು ನಾವು ಚರ್ಚಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


