ಪಾಕಿಸ್ತಾನ ಆತ್ಮಹತ್ಯಾ ದಾಳಿ, ೨೬ ಜನ ಹತ್ಯೆ
ಆತ್ಮಹತ್ಯಾ ಬಾಂಬ್ ದಾಳಿ ಹಾಗು ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಪಾಕಿಸ್ತಾನ ಅಫ್ಘಾನಿಸ್ತಾನ ಗಡಿಯ ಉತ್ತರ ವಾಜಿರಿಸ್ಥಾನದಲ್ಲಿ

ಇಸ್ಲಾಮಾಬಾದ್: ಆತ್ಮಹತ್ಯಾ ಬಾಂಬ್ ದಾಳಿ ಹಾಗು ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಪಾಕಿಸ್ತಾನ ಅಫ್ಘಾನಿಸ್ತಾನ ಗಡಿಯ ಉತ್ತರ ವಾಜಿರಿಸ್ಥಾನದಲ್ಲಿ ನಡೆದ ಕಾಳಗದಲ್ಲಿ ಸೋಮವಾರ ಕನಿಷ್ಠ ೧೯ ಭಯೋತ್ಪಾದಕರು ಹಾಗೂ ೭ ಜನ ಸೈನಿಕರು ಮೃತಪಟ್ಟಿದ್ದಾರೆ.
ಅಂತರ ಸೇವಾ ಸಾರ್ವಜನಿಕ ಸಂಪರ್ಕ ಸಂಸ್ಥೆಯ ಪ್ರಕಾರ ಆಫ್ಘಾನಿಸ್ಥಾನದ ಗಡಿಯ ಉತ್ತರ ವಾಜಿರಿಸ್ಥಾನದಲ್ಲಿ ತೀವ್ರ ಗುಂಡಿನ ಕಾಳಗ ನಡೆಯಿತೆಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಭದ್ರತಾ ಪಡೆಗಳು ಭಯೋತ್ಪಾದಕರನ್ನು ಅಟ್ಟಿಸಿಕೊಂಡು ಹೋಗಿ ಸುತ್ತುವರೆದಾಗ ಆತ್ಮಹತ್ಯಾ ಬಾಂಬ್ ಇದ್ದ ಜ್ಯಾಕೆಟ್ ತೊಟ್ಟಿದ್ದ ಭಯೋತ್ಪಾದಕನೊಬ್ಬ ಸ್ಫೋಟಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಐದು ಜನ ಅಧಿಕಾರಿಗಳು ಒಳಗೊಂಡಂತೆ ಏಳು ಜನ ಸೈನಿಕರು ಈ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


