ಪ್ರಧಾನ ಸುದ್ದಿ

ಕಳವು ಮಾಡಿದ್ದಕ್ಕೆ ಮಗನಿಗೇ ಬೆಂಕಿ ಹಚ್ಚಿದ ತಾಯಿ

ಆಘಾತಕಾರಿ ಘಟನೆಯೊಂದರಲ್ಲಿ ತನ್ನ ಏಳು ವರ್ಷದ ಮಗ ೫ ರೂ ಕದ್ದನೆಂದು ದೂರಿ ರಾಜಸ್ಥಾನದ ಮಹಿಳೆಯೊಬ್ಬಳು ಅವನಿಗೆ ಬೆಂಕಿ ಹಚ್ಚಿದ್ದಕ್ಕೆ ಮಗುವಿಗೆ ತೀವ್ರ

ಕಳವು ಮಾಡಿದ್ದಕ್ಕೆ ಮಗನಿಗೇ ಬೆಂಕಿ ಹಚ್ಚಿದ ತಾಯಿ
ಸಾಂದರ್ಭಿಕ ಚಿತ್ರ
Published On :

ಜೈಪುರ: ಆಘಾತಕಾರಿ ಘಟನೆಯೊಂದರಲ್ಲಿ ತನ್ನ ಏಳು ವರ್ಷದ ಮಗ ೫ ರೂ ಕದ್ದನೆಂದು ದೂರಿ ರಾಜಸ್ಥಾನದ ಮಹಿಳೆಯೊಬ್ಬಳು ಅವನಿಗೆ ಬೆಂಕಿ ಹಚ್ಚಿದ್ದಕ್ಕೆ ಮಗುವಿಗೆ ತೀವ್ರ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಜೈಪುರದಿಂದ ೩೫೦ ಕಿಮೀ ದೂರದಲ್ಲಿರುವ ಬಿಕನೇರ್ ಜಿಲ್ಲೆಯ ರಾಮಪುರದಲ್ಲಿ ಈ ಘಟನೆ ನಡೆದಿದೆ. ಮಗುವಿಗೆ ೩೦% ಸುಟ್ಟ ಗಾಯಗಳಾಗಿವೆ. ಅವನ ಸ್ಥಿತಿ ಈಗ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

"ನಾವು ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ" ಎಂದು ಬಿಕನೇರ್ ನ ಪೊಲೀಸ್ ಮಹಾನಿರ್ದೇಶಕ ಸಂತೋಶ್ ಕುಮಾರ್ ತಿಳಿಸಿದ್ದಾರೆ. "ನಾವಿನ್ನೂ ಅವರನ್ನು ಬಂಧಿಸಿಲ್ಲ. ತನಿಖೆ ಪ್ರಗತಿಯಲ್ಲಿದೆ" ಎಂದಿದ್ದಾರೆ.

ತಿಂಡಿ ಕೊಳ್ಳಲು ತನ್ನಮ್ಮನಿಗೆ ಹೇಳದೆ ಡಬ್ಬಿಯಿಂದ ೫ ರುಪಾಯಿಯನ್ನು ಆ ಬಾಲಕ ಎತ್ತುಕೊಂಡಿದ್ದ ಎನ್ನಲಾಗಿದೆ. ಇದನ್ನು ತಿಳಿದ ತಾಯಿ ಮಗನನ್ನು ಥಳಿಸಿದ್ದಲ್ಲದೆ, ಅವನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ ಎಂದು ದೂರಲಾಗಿದೆ.

ಮಗುವಿನ ಆಕ್ರಂದನ ಕೇಳಿದ ನೆರೆಹೊರೆಯವರು ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ನನ್ನ ಉದ್ದೇಶ ಮಗನಿಗೆ ಶಿಕ್ಷೆ ನೀಡುವುದಷ್ಟೇ ಆಗಿತ್ತು ಎಂದು ತಾಯಿ ಪೊಲೀಸರಿಗೆ ತಿಳಿಸಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.