ಪ್ರಧಾನ ಸುದ್ದಿ

ಯಾಕೂಬ್ ದೇಹ ಕುಟುಂಬದ ವಶಕ್ಕೆ

ಗುರುವಾರ ಬೆಳಗ್ಗೆ ನೇಣುಗಂಬಕ್ಕೆ ಏರಿಸಲಾದ ಮುಂಬೈ ಸರಣಿ ಸ್ಫೋಟದ ಆರೋಪಿ ಯಾಕೂಬ್ ಮೆಮನ್ ನ ದೇಹವನ್ನು ಅವರ ಕುಟುಂಬದ ವಶಕ್ಕೆ...

ಯಾಕೂಬ್ ದೇಹ ಕುಟುಂಬದ ವಶಕ್ಕೆ
ಗುರುವಾರ ಬೆಳಗ್ಗೆ ನೇಣುಗಂಬಕ್ಕೆ ಏರಿಸಲಾದ ಮುಂಬೈ ಸರಣಿ ಸ್ಫೋಟದ ಆರೋಪಿ ಯಾಕೂಬ್ ಮೆಮನ್
Published On :

ನಾಗಪುರ: ಗುರುವಾರ ಬೆಳಗ್ಗೆ ನೇಣುಗಂಬಕ್ಕೆ ಏರಿಸಲಾದ ಮುಂಬೈ ಸರಣಿ ಸ್ಫೋಟದ ಆರೋಪಿ ಯಾಕೂಬ್ ಮೆಮನ್ ನ ದೇಹವನ್ನು ಅವರ ಕುಟುಂಬದ ವಶಕ್ಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮೊದಲು ಅಧಿಕಾರಿಗಳು ಕುಟುಂಬ ವಶಕ್ಕೆ ನೀಡದೆ ಜೈಲಿನ ಆವರಣದಲ್ಲೇ ಅಂತಿಮ ವಿಧಿಯನ್ನು ನಡೆಸಲು ನಿರ್ಧರಿಸಿದ್ದರು.

ಆದರೆ ಯಾಕೂಬ್ ನನ್ನು ಗಲ್ಲಿಗೇರಿಸಿದ ನಂತರ, ಕುಟುಂಬ ಅಂತಿಮ ವಿಧಿಗಳನ್ನು ಮುಂಬೈನಲ್ಲಿ ನೆರವೇರಿಸಲು ಅನುವು ಮಾಡಿಕೊಡಲು ದೇಹವನ್ನು ವಶಕ್ಕೆ ನೀಡುವಂತೆ  ಮೆಮನ್ ಸಹೋದರ ಸುಲೈಮಾನ್ ಜೈಲು ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ಕೂಡಲೆ ವಿಚಾರಣೆ ಮಾಡಿ, ಕಠಿಣ ಷರತ್ತುಗಳೋಂದಿಗೆ ಅನುಮತಿ ನೀಡಿ ದೇಹವನ್ನು ವಶಕ್ಕೆ ನೀಡಲಾಗಿದೆ.

ದೇಹವನ್ನು ನಾಗಪುರ ವಿಮಾನ ನಿಲ್ದಾಣದಿಂದ ವೈಮಾನಿಕ ಆಂಬ್ಯುಲೆನ್ಸ್ ಮೂಲಕ ಮುಂಬೈಗೆ ಗುರುವಾರ ಸಂಜೆ ಕೊಂಡೊಯ್ಯಲಾಗುವುದು.

ಈ ಹಿಂದೆ ದೆಹಲಿ ಸಂಸತ್ತಿನ ದಾಳಿಯ ತಪ್ಪಿತಸ್ಥ ಅಪ್ಜಲ್ ಗುರುವಿನ ದೇಶವನ್ನು ಕುಟುಂಬ ವಶಕ್ಕೆ ನೀಡದೆ ತಿಹಾರ್ ಜೈಲಿನಲ್ಲಿ ಮಣ್ಣುಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.