ಕೊನೆಗೂ ಕಲಾಂ ಅಸೈನ್‍ಮೆಂಟ್ ಕೊಡಲೇ ಇಲ್ಲ!
ಜೀವನದ ಕೊನೆಯ ದಿನದಂದೂ ಎಂದಿನಂತೆ ಉಲ್ಲಸಿತರಾಗಿದ್ದ ಕಲಾಂ ಅವರು ಶಿಲ್ಲಾಂಗ್‍ನ ಐಐಎಂ ವಿದ್ಯಾರ್ಥಿಗಳಿಗೆ ಸರ್‍ಪ್ರೈಸ್ ಅಸೈನ್‍ಮೆಂಟ್...

ಕೋಲ್ಕತಾ: ಜೀವನದ ಕೊನೆಯ ದಿನದಂದೂ ಎಂದಿನಂತೆ ಉಲ್ಲಸಿತರಾಗಿದ್ದ ಕಲಾಂ ಅವರು ಶಿಲ್ಲಾಂಗ್‍ನ ಐಐಎಂ ವಿದ್ಯಾರ್ಥಿಗಳಿಗೆ ಸರ್‍ಪ್ರೈಸ್ ಅಸೈನ್‍ಮೆಂಟ್‍ವೊಂದನ್ನು ಕೊಡಲು ನಿರ್ಧರಿಸಿದ್ದರು.
ಆದರೆ, ಅವರ ಆಸೆ ಕೊನೆಗೂ ಈಡೇರಲೇ ಇಲ್ಲ ಎಂದಿದ್ದಾರೆ ಅವರ ಆಪ್ತ ಸೃಜನ್ ಪಾಲ್ ಸಿಂಗ್. ಗುವಾಹತಿಯಿಂದ ಶಿಲ್ಲಾಂಗ್ ಗೆ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಕಲಾಂ ಅವರು ಸಂಸತ್ ಗದ್ದಲದ ಬಗ್ಗೆ ನನ್ನನ್ನು ಮಾತಿಗೆಳೆದರು. ಕಲಾಪಕ್ಕೆ ಅಡ್ಡಿಯಾಗುತ್ತಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದರು. ಜತೆಗೆ, ``ವಿದ್ಯಾರ್ಥಿಗಳಿಗೆ ನಾವೊಂದು ಸರ್‍ಪ್ರೈಸ್ ಕೆಲಸ ಕೊಡೋಣ. ಸಂಸತ್ ಗದ್ದಲವನ್ನು ಕೊನೆಗಾಣಿಸಲು ಮೂರು ಹೊಸ ಐಡಿಯಾವನ್ನು ನೀಡಿ ಎಂದು ಹೇಳೋಣ. ಅವರು ಅದಕ್ಕೆ ಲಿಖಿತ ರೂಪದಲ್ಲಿ ಉತ್ತರ ನೀಡಲಿ'' ಎಂದಿದ್ದರು. ನಾನು ಅವರ ಕೊನೆಯ ಆಸೆ ಏನೆಂದು ಕೇಳಿದಾಗ ಅವರು, ``ದೇಶದ ಶತಕೋಟಿ ಮುಖಗಳಲ್ಲಿ ಶತಕೋಟಿ ಮುಗುಳ್ನಗೆಗಳನ್ನು ಕಾಣುವುದು'' ಎಂದಿದ್ದರು.
ತಂತ್ರಜ್ಞಾನ ವಿವಿಗೆ ಕಲಾಂ ಹೆಸರು
ಕೇರಳ ಸರ್ಕಾರದ ಪ್ರಸ್ತಾವಿತ ತಂತ್ರಜ್ಞಾನ ವಿಶ್ವವಿದ್ಯಾಲಯಕ್ಕೆ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಹೆಸರಿಡಲು ನಿರ್ಧರಿಸಲಾಗಿದೆ. ಕಲಾಂ ಅವರು ದೇಶಕ್ಕೆ ನೀಡಿದ ಗಣನೀಯ ಕೊಡುಗೆಯನ್ನು ಸ್ಮರಿಸಿ, ಅವರ ಹೆಸರನ್ನು ವಿವಿಗಿಡಲು ತೀರ್ಮಾನಿಸಿದ್ದಾಗಿ ಕೇರಳ ಅಸೆಂಬ್ಲಿಯಲ್ಲಿ ಸಿಎಂ ಉಮ್ಮನ್ ಚಾಂಡಿ ಘೋಷಿಸಿದ್ದಾರೆ.
ಕಲಾಂ ಅಪೂರ್ಣ ಉಪನ್ಯಾಸ
ಐಐಎಂ ಶಿಲ್ಲಾಂಗ್‍ನಲ್ಲಿ ಕಲಾಂ ಅವರು ಮಾಡಬೇಕಿದ್ದ ಉಪನ್ಯಾಸದ ಪೂರ್ಣ ಭಾಗವು ಶೀಘ್ರವೇ ಪುಸ್ತಕ ರೂಪದಲ್ಲಿ ದೊರೆಯಲಿದೆ. ಐಐಎಂನಲ್ಲಿ ಅವರು "ಕ್ರಿಯೇಟಿಂಗ್ ಎ ಲಿವಬಲ್ ಪ್ಲಾನೆಟ್ ಅರ್ತ್" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಬೇಕಿತ್ತು. ಆದರೆ ಉಪನ್ಯಾಸ ಆರಂಭಿಸಿದ ಕೆಲವೇ ಕ್ಷಣದಲ್ಲಿ ಅವರು ಕುಸಿದು ಬಿದ್ದಿದ್ದರು. ಹೀಗಾಗಿ ಉಪನ್ಯಾಸವು ಅಪೂರ್ಣಗೊಂಡಿತ್ತು. ಅವರು ಅರ್ಧ ಬರೆದು ಮುಗಿಸಿರುವ ಪುಸ್ತಕದಲ್ಲಿ ಈ ಉಪನ್ಯಾಸವೂ ಸೇರಿತ್ತು. ಈ ಹಿನ್ನೆಲೆಯಲ್ಲಿ ಅದನ್ನು ಅದನ್ನು ಹೇಗಾದರೂ ಮಾಡಿ ಪೂರ್ಣಗೊಳಿಸಬೇಕೆಂಬ ಇರಾದೆಯಿದೆ ಎಂದು ಕಲಾಂರ ಆಪ್ತ ಸಹಾಯಕ ಸೃಜನ್ ಪಾಲ್ ಸಿಂಗ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


