ಪ್ರಧಾನ ಸುದ್ದಿ

ಪಂಜಾಬ್ ಪೋಲಿಸ್ ಠಾಣೆಯ ಮೇಲೆ ಉಗ್ರರ ದಾಳಿ; ಐವರು ಸಾವು

ಭಯೋತ್ಮಾದಕ ಕೃತ್ಯ ಎಂದು ಶಂಕಿಸಲಾಗಿರುವ ಘಟನೆಯಲ್ಲಿ, ಸೇನಾ ಉಡುದು ಧರಿಸಿ ಸುಸಜ್ಜಿತ ಶಸ್ತ್ರಾಸ್ತ್ರಗಳೊಂದಿಗೆ ಪಂಜಾಬಿನ ದೀನನಗರ್ ಪೋಲಿಸ್ ಠಾಣೆಯ ಮೇಲೆ

ಪಂಜಾಬ್ ಪೋಲಿಸ್ ಠಾಣೆಯ ಮೇಲೆ ಉಗ್ರರ ದಾಳಿ; ಐವರು ಸಾವು
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಭಯೋತ್ಮಾದಕ ಕೃತ್ಯ ಎಂದು ಶಂಕಿಸಲಾಗಿರುವ ಘಟನೆಯಲ್ಲಿ, ಸೇನಾ ಉಡುಪು ಧರಿಸಿ ಸುಸಜ್ಜಿತ ಶಸ್ತ್ರಾಸ್ತ್ರಗಳೊಂದಿಗೆ ಪಂಜಾಬಿನ ದೀನನಗರ್ ಪೋಲಿಸ್ ಠಾಣೆಯ ಮೇಲೆ ಸೋಮವಾರ ಬೆಳಗ್ಗೆ ಭಯೋತ್ಪಾದಕರು ಅಪ್ರಚೋದಿತ ದಾಳಿ ನಡೆಸಿದ್ದಾರೆ.

ಪ್ರತ್ಯಕ್ಷಶದರ್ಶಿಯ ಪ್ರಕಾರ ೩-೪ ಜನ ಭಯೋತ್ಪಾದಕರು ಜಮ್ಮು ಕಡೆಗೆ ಹೊರಟಿದ್ದ ಬಸ್ ಒಂದರ ಮೇಲೆ ಗುಂಡು ಹಾರಿಸಿ ನಂತರ ಪೋಲಿಸ್ ಠಾಣೆಯೆಡೆಗೆ ತೆರಳಿ ಗುಂಡಿನ ದಾಳಿ ನಡೆಸಿದ್ದಾರೆ.

ಪೊಲೀಸರು ತಿಳಿಸಿದಂತೆ ದಾಳಿಕೋರರು ಹತ್ತಿರದ ಹೆದ್ದಾರಿಯಿಂದ ಕಾರೊಂದನ್ನು  ಅಪಹರಿಸಿ ಸುಮಾರು ೫:೩೦ಕ್ಕೆ ದೀನನಗರ್ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಈ ಕೃತ್ಯದಲ್ಲಿ ಐವರು ವಾನಿರತ ಪೊಲೀಸ್ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ.

ಆಘಾತಕಾರಿ ಬೆಳವಣಿಗೆಯಲ್ಲಿ ಅಮೃತಸರ-ಫಾಠಂಕೋಟ್ ರೈಲು ಮಾರ್ಗ ಟ್ರ್ಯಾಕ್ ಮೇಲೆ ಭಾರಿ ಪ್ರಮಾಣದ ಬಾಂಬುಗಳು ಪತ್ತೆಯಾಗಿದ್ದು ದೀನನಗರ್ ನಲ್ಲಿ ರೈಲ್ವೇ ದಟ್ಟನೆಯಿಂದ ರೈಲುಗಳ ಚಾಲನೆಯನ್ನು ಸ್ಥಗಿತಗೊಳಿಸಲಾಗಿದೆ.

ಸದ್ಯದ ವರದಿಗಳ ಪ್ರಕಾರ ಬಿಳಿ ಆಲ್ಟೋ ಕಾರಿನಲ್ಲಿ ಬಂದ ಬಂದೂಕುದಾರಿಯನ್ನು  ಪೊಲೀಸ್ ಠಾಣೆಯಲ್ಲಿ ಸುತ್ತುವರೆದಿದ್ದು ಗುಂಡಿನ ಚಕಮಕಿ ಮುಂದುವರೆದಿದೆ.

ಸೇನೆ ಮತ್ತು ಹೆಚ್ಚುವರಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಇಡಿ ಪ್ರದೇಶವನ್ನು ಸುತ್ತುವರೆಯಲಾಗಿದೆ. ಈ ನಗರ ಜಮ್ಮು ಕಾಶ್ಮೀರದ ಗಡಿಯಲ್ಲಿದ್ದು, ಚಂಡಿಘರ್ ನಿಂದ 235 ಕಿಮೀ  ದೂರದಲ್ಲಿದೆ.

ದೀನನಗರ್ ನಲ್ಲಿ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.