ಯಾಕೂಬ್ಗೆ ಗಲ್ಲು ಶಿಕ್ಷೆ ಬೇಡ ಎಂದ ಸಲ್ಮಾನ್ ಖಾನ್
1993ರ ಮುಂಬೈ ಬಾಂಬ್ ಸರಣಿ ಸ್ಫೋಟ ಪ್ರಕರಣದ ಅಪರಾಧಿ ಯಾಕೂಬ್ ಮೆಮನ್ ನನ್ನು ಗಲ್ಲಿಗೇರಿಸಲು ದಿನಾಂಕ...

ನವದೆಹಲಿ: 1993ರ ಮುಂಬೈ ಬಾಂಬ್ ಸರಣಿ ಸ್ಫೋಟ ಪ್ರಕರಣದ ಅಪರಾಧಿ ಯಾಕೂಬ್ ಮೆಮನ್ ನನ್ನು ಗಲ್ಲಿಗೇರಿಸಲು ದಿನಾಂಕ ನಿಗದಿಯಾಗಿರುವ ಬೆನ್ನಲ್ಲೇ, ಬಾಲಿವುಡ್ ನಟ ಸಲ್ಮಾನ್ ಖಾನ್ ಯೂಕೂಬ್ ಗಲ್ಲು ಶಿಕ್ಷೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಯೂಕೂಬ್ ಸಹೋದರ ಟೈಗರ್ ಮೆಮನ್ ನಿಜವಾದ ಅಪರಾಧಿ. ಆತನನ್ನು ಗಲ್ಲಿಗೇರಿಸಿ, ಟೈಗರ್ ಮೆಮನ್ ಮಾಡಿದ ತಪ್ಪಿಗೆ ಯಾಕೂಬ್ ಗೆ ಶಿಕ್ಷೆ ಬೇಡ ಎಂದು ಸಾಮಾಜಿಕ ಜಾಲತಾಣದಲ್ಲಿ ಸಲ್ಮಾನ್ ಖಾನ್ ಟ್ವೀಟ್ ಮಾಡಿದ್ದಾರೆ.
ಕಳೆದ ಮೂರು ದಿನಗಳಿಂದ ಈ ಬಗ್ಗೆ ಬರೆಯಲು ಇಚ್ಛಿಸಿದ್ದೇ ಆದರೆ, ನನ್ನೊಳಗೆ ಭಯ ಕಾಡುತ್ತಿತ್ತು. ಹಾಗಾಗಿ, ಈಗ ಅಂತಿಮವಾಗಿ ನನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದೇನೆ ಎಂದು ಸಲ್ಮಾನ್ ಖಾನ್ ಬರೆದುಕೊಂಡಿದ್ದಾರೆ.
ಟ್ವೀಟರ್ ನಲ್ಲಿ ಸಲ್ಮಾನ್ ಬರೆದುಕೊಂಡಿದ್ದು ಹೀಗೆ...
ಕಳೆದ ಮೂರು ದಿನಗಳಿಂದ ಈ ರೀತಿ ಟ್ವೀಟ್ ಬರೆಯಲು ಇಚ್ಛಿಸಿದ್ದೆ. ಆದರೆ ಟ್ವೀಟ್ ಮಾಡಲು ಭಯ ಕಾಡುತ್ತಿತ್ತು. ಆದರೆ ಆತನನ್ನ ನಂಬಿಕೊಂಡು ಆತನ ಕುಟುಂಬವಿದೆ. ಸಹೋದರನನ್ನ ಗಲ್ಲಿಗೇರಿಸಬೇಡಿ, ತಲೆ ತಪ್ಪಿಸಿಕೊಂಡಿರುವ ಟೈಗರ್ ಮೆಮನ್ ನನ್ನ ಗಲ್ಲಿಗೇರಿಸಿ ಎಂದು ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


