ಬಿಹಾರದಲ್ಲಿನ ವಿದ್ಯುತ್ ಸಂಪರ್ಕ ವ್ಯವಸ್ಥೆ ಮೋದಿಯವರಿಗೂ ಸಹಾಯ ಮಾಡಿದೆ
ಬಿಹಾರದಲ್ಲಿ ವಿದ್ಯುತ್ ಸಂಪರ್ಕ ವ್ಯವಸ್ಥೆ ಕಳಪೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಇದಕ್ಕೆ ಬಿಹಾರ...

ಪಾಟ್ನಾ: ಬಿಹಾರದಲ್ಲಿ ವಿದ್ಯುತ್ ಸಂಪರ್ಕ ವ್ಯವಸ್ಥೆ ಕಳಪೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಇದಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿರುಗೇಟು ನೀಡಿದ್ದಾರೆ.
ಪ್ರಧಾನಿಯವರು ಬಿಹಾರದಲ್ಲಿ ವಿದ್ಯುತ್ ಸಂಪರ್ಕ ಸರಿಯಿಲ್ಲ ಎಂದು ಭಾಷಣದಲ್ಲಿ ಹೇಳಿದಾಗ ಅದಕ್ಕೆ ಜನರು ಕರತಾಡನ ಮಾಡಲಿಲ್ಲ. ಯಾಕೆಂದರೆ ಇಲ್ಲಿಯ ಜನರಿಗೆ ನಮ್ಮ ರಾಜ್ಯದಲ್ಲಿ ವಿದ್ಯುತ್ ಸಂಪರ್ಕ ವ್ಯವಸ್ಥೆ ಹೇಗೆ ಅಭಿವೃದ್ಧಿಗೊಂಡಿದೆ ಎಂಬುದು ಗೊತ್ತಿದೆ.
ಬಿಹಾರದಲ್ಲಿ ವಿದ್ಯುತ್ ಸಂಪರ್ಕ ವ್ಯವಸ್ಥೆ ಉತ್ತಮಗೊಂಡಿದ್ದು ಇದರಿಂದ ಮೋದಿಯವರಿಗೇ ಹೆಚ್ಚು ಲಾಭವಾಗಿದೆ. ಲೋಕಸಭಾ ಚುನಾವಣೆ ವೇಳೆ ಗ್ರಾಮದ ಜನರು ಮೋದಿಯವರ ಭಾಷಣವನ್ನು ಟೀವಿಯಲ್ಲಿ ನೋಡುವಂತಾಗಿದ್ದು ವಿದ್ಯುತ್ ಸಂಪರ್ಕ ವ್ಯವಸ್ಥೆ ಉತ್ತಮಗೊಂಡಿರುವುದರಿಂದಲೇ ಆಗಿದೆ ಎಂದು ನಿತೀಶ್ ಹೇಳಿದ್ದಾರೆ.
ಬಿಹಾರಕ್ಕಾಗಿ ಮೋದಿ ಯಾವುದೇ ಸಹಾಯ ಮಾಡುತ್ತಿಲ್ಲ ಎಂದು ದೂರಿದ ನಿತೀಶ್, ದೇಶದ ಸೇವೆ ಮಾಡುವ ಸಲುವಾಗಿ ಜನರು ಮೋದಿಯವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಆದರೆ ಅವರು ಬಿಹಾರಕ್ಕಾಗಿ ಏನೂ ಮಾಡಿಲ್ಲ. ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅವರಿಗೆ ಬಿಹಾರ ನೆನಪಾಗಿದೆ.
ಅದೇ ವೇಳೆ ಜಾರ್ಜ್ ಫೆರ್ನಾಂಡೀಸ್ ಬಗ್ಗೆ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಹಾರ ಸಿಎಂ ಅದೊಂದು ಕಾಲವಿತ್ತು ಬಿಜೆಪಿ ಕೆ ತೀನ್ ಧರೋಹರ್ -ಅಟಲ್, ಅಡ್ವಾಣಿ, ಮುರಳಿ ಮನೋಹರ್ (ಬಿಜೆಪಿಯ ಮೂರು ಸ್ವತ್ತು-ಅಟಲ್, ಅಡ್ವಾಣಿ, ಮುರಳಿ ಮನೋಹರ್)ಎಂಬುದು ಬಿಜೆಪಿಯ ಸ್ಲೋಗನ್ ಆಗಿತ್ತು. ಆದರೆ ಈಗ ಅವರು ಅಡ್ವಾಣಿ ಮತ್ತು ಜೋಷಿಯವರಿಗೆ ಏನು ಮಾಡಿದ್ದಾರೆ ಎಂದು ಎಲ್ಲಿರಿಗೂ ಗೊತ್ತಾಗಿದೆ. ಈಗ (ಪಿಎಂ) ಅವರು ಜಾರ್ಜ್ ಫೆರ್ನಾಂಡೀಸ್ ಬಗ್ಗೆ ಮಾತನಾಡುತ್ತಿದ್ದಾರೆ. ಜಸ್ವಂತ್ ಸಿಂಗ್ ಗೆ ಏನು ಮಾಡಿದ್ದಾರೆ ಎಂಬುದನ್ನು ಅವರು ಮರೆತಂತಿದೆ ಎಂದು ನಿತೀಶ್ ಮೋದಿ ವಿರುದ್ಧ ಗುಡುಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


