ಪ್ರಧಾನ ಸುದ್ದಿ

ಜಾರ್ಖಂಡದಲ್ಲಿ ೩೦ ವಾಹನಗಳಿಗೆ ಬೆಂಕಿ ಹಚ್ಚಿದ ಮಾವೋವಾದಿಗಳು

ಜಾರ್ಖಂಡದ ಬೋಕೋರಾವ್ ಜಿಲ್ಲೆಯಲ್ಲಿ ಕಲ್ಲಿದ್ದಲು ಗಣಿಗಾರಿಕೆಗೆ ಸಂಬಂಧಿಸಿದ ಸೆಂಟ್ರಲ್ ಕೋಲ್ ಫಿಲ್ಡ್ ಲಿಮಿಟೆಡ್ (ಸಿಸಿಎಲ್) ಗೆ ಸೇರಿದ ೩೦ ವಾಹನಗಳನ್ನು

ಜಾರ್ಖಂಡದಲ್ಲಿ ೩೦ ವಾಹನಗಳಿಗೆ ಬೆಂಕಿ ಹಚ್ಚಿದ ಮಾವೋವಾದಿಗಳು
ಸಾಂದರ್ಭಿಕ ಚಿತ್ರ
Published On :

ರಾಂಚಿ: ಜಾರ್ಖಂಡದ ಬೋಕೋರಾವ್ ಜಿಲ್ಲೆಯಲ್ಲಿ ಕಲ್ಲಿದ್ದಲು ಗಣಿಗಾರಿಕೆಗೆ ಸಂಬಂಧಿಸಿದ ಸೆಂಟ್ರಲ್ ಕೋಲ್ ಫೀಲ್ಡ್ ಲಿಮಿಟೆಡ್(ಸಿಸಿಎಲ್) ಗೆ ಸೇರಿದ ೩೦ ವಾಹನಗಳನ್ನು ಮಾವೋವಾದಿಗಳು ಬೆಂಕಿಗೆ ಆಹುತಿಯಾಗಿಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ರಾಂಚಿಯಿಂದ ೧೩೦ ಕಿಮೀ ದೂರದಲ್ಲಿರುವ ಬರ್ಮೋ ಪ್ರದೇಶದ ಸಿಸಿಎಲ್ ಯೋಜನಾ ಪ್ರದೇಶಕ್ಕೆ ಶುಕ್ರವಾರ ರಾತ್ರಿ ದಾಳಿಮಾಡಿದ ೧೦೦ಕ್ಕೂ ಹೆಚ್ಚು ಜನ ಮಾವೋವಾದಿಗಳು ಈ ಕೃತ್ಯವನ್ನು ಎಸಗಿದ್ದಾರೆ.

ಭದ್ರತಾ ಸಿಬ್ಬಂದಿಗಳಿಗೆ ಥಳಿಸಿ ಅವರನ್ನು ಓಡಿಹೋಗುವಂತೆ ಹೇಳಿ ವಾಹನಗಳಿಗೆ ಮಾವೋವಾದಿಗಳು ಬೆಂಕಿ ಹಚ್ಚಿದ್ದಾರೆ.

ರಾಜ್ಯದ ೨೪ ಜಿಲ್ಲೆಗಳ ೧೮ ಜಿಲ್ಲೆಗಳಲ್ಲಿ ಮಾವೋವಾದಿಗಳ ಚಟುವಟಿಕೆ ತೀವ್ರವಾಗಿದೆ. ಈ ಕೃತ್ಯವೆಸಗಿದ ಮಾವೋವಾದಿಗಳ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.