ಪ್ರಧಾನ ಸುದ್ದಿ

ಅಡುಗೆ ಸಿಲಿಂಡರ್ ಸ್ಫೋಟ; ಕುಟುಂಬದ ನಾಲ್ಕು ಜನರ ಸಾವು

ಮುಂಬೈನ ಸ್ಲಂ ಪ್ರದೇಶದಲ್ಲಿ ಅಡುಗೆ ಅನಿಲ ಸಿಲಿಂಡರ್ ಒಂದು ಸ್ಫೋಟಗೊಂಡು ಕುಟುಂಬದ ನಾಲ್ಕು ಜನ ಮೃತಪಟ್ಟಿದ್ದು, ಮೂವರಿಗೆ ಗಾಯಗೊಂಡ ಘಟನೆ ಗುರುವಾರ

ಅಡುಗೆ ಸಿಲಿಂಡರ್ ಸ್ಫೋಟ; ಕುಟುಂಬದ ನಾಲ್ಕು ಜನರ ಸಾವು
ಸಾಂದರ್ಭಿಕ ಚಿತ್ರ
Published On :

ಮುಂಬೈ: ಮುಂಬೈನ ಸ್ಲಂ ಪ್ರದೇಶದಲ್ಲಿ ಅಡುಗೆ ಅನಿಲ ಸಿಲಿಂಡರ್ ಒಂದು ಸ್ಫೋಟಗೊಂಡು ಕುಟುಂಬದ ನಾಲ್ಕು ಜನ ಮೃತಪಟ್ಟಿದ್ದು, ಮೂವರಿಗೆ ಗಾಯಗೊಂಡ ಘಟನೆ ಗುರುವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೂರ್ವ ಸಾಂತಾಕ್ರೂಜ್ ನ ಮಣಿಲಾಲ್ ನ ಗೋಲಿಬಾರ್ ಸ್ಲಂ ಪ್ರದೇಶದಲ್ಲಿ ಈ ಸ್ಫೋಟ ನಡೆದಿದೆ. ಮನೆಯೊಡತಿ ಸಾಯಿಕುಮಾರಿ ಸುಮಾರು ೧೧ ಘಂಟೆ ಬೆಳಗ್ಗೆ ಸಿಲಿಂಡರ್ ಬದಲಿಸುವ ವೇಳೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ೯೦% ಸುಟ್ಟ ಗಾಯಗೊಳಿಂದಿಗೆ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತಪಟ್ಟವರನ್ನು ರಾಜದೇವ್ ದೀಕ್ಷಿತ್(೫೦), ಕಪಿಲ್ ದೀಕ್ಷಿತ್ (೪೦), ರಾಜೇಂದ್ರ ದೀಕ್ಷಿತ್ (೩೦) ಮತ್ತು ಯಶವಂತ್ ದೀಕ್ಷಿತ್ (೧೮) ಎಂದು ಗುರುತಿಸಲಾಗಿದೆ.

ಗಾಯಗೊಂಡವರು ಸಾಯಿಕುಮಾರಿ ದೀಕ್ಷಿತ್ (೪೦), ಶೋಭಾ ರಾಜೇಂದ್ರ ದೀಕ್ಷಿತ್ (೩೫) ಮತ್ತು ಮೀರಾ ಉಪಾಧ್ಯಾಯ (೪೦)  ಎಂದು ಗುರುತಿಸಲಾಗಿದ್ದು ಅವರುಗಳನ್ನು ವಿ ಎನ್ ದೇಸಾಯಿ ಆಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.