೩೧ ಪ್ರಶ್ನೆಗಷ್ಟೇ ಉತ್ತರಿಸಿ ವೈದ್ಯಕೀಯ ಪ್ರವೇಶ ಪರೀಕ್ಷೆ ಪಾಸು ಮಾಡಿದ ಪ್ರಭಾವಿ ವ್ಯಕ್ತಿಯ ಪುತ್ರಿ
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರ ಮಾಜಿ ಖಾಸಗಿ ಕಾರ್ಯದರ್ಶಿ ಪ್ರೇಮಚಂದ್ರ ಪ್ರಸಾದ್ ಅವರ ಪುತ್ರಿ ಅನಿತಾ ಕುಮಾರಿ ಪ್ರವೇಶ ಪರೀಕ್ಷೆಯಲ್ಲಿ

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರ ಮಾಜಿ ಖಾಸಗಿ ಕಾರ್ಯದರ್ಶಿ ಪ್ರೇಮಚಂದ್ರ ಪ್ರಸಾದ್ ಅವರ ಪುತ್ರಿ ಅನಿತಾ ಕುಮಾರಿ ಪ್ರವೇಶ ಪರೀಕ್ಷೆಯಲ್ಲಿ ೮೪% ಅಂಕ ತೆಗೆಯುವುದರೊಂದಿಗೆ ಭೋಪಾಲ್ ನ ಪ್ರತಿಷ್ಟಿತ ಗಾಂಧಿ ವೈದ್ಯಕೀಯ ಕಾಲೇಜಿಗೆ ೨೦೧೨ ರಲ್ಲಿ ಪ್ರವೇಶ ಪಡೆದಿದ್ದರು.
೨೦೦ ಪ್ರಶ್ನೆಗಳಲ್ಲಿ ಅನಿತಾ ಸರಿ ಉತ್ತರ ನೀಡಿದ್ದು ಕೆಲವ ೩೧ ಪ್ರಶ್ನೆಗಳಿಗೆ ಆದರೆ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ್ದು ಮಾತ್ರ ೮೫%. ಇಂಗ್ಲಿಶ್ ದಿನಪತ್ರಿಕೆ ಸಂಪಾದಿಸಿರುವ ದಾಖಲೆಗಳ ಪ್ರಕಾರ ೨೦೦ ಪ್ರಶೆಗಳಲ್ಲಿ ಅನಿತಾ ೬೧ಕ್ಕೆ ಉತ್ತರ ಬರೆಯಲು ಪ್ರಯತ್ನಿಸಿದ್ದರು ಆದರೆ ಅವುಗಳಲ್ಲಿ ೩೧ ಮಾತ್ರ ಸರಿ ಇವೆ.
ಆದರೆ ಉಳಿದ ೧೩೦ ಪ್ರಶ್ನೆಗಳನ್ನು ಬೇರೆ ಇಂಕಿನಲ್ಲಿ ಉತ್ತರ ಬರೆಯಲಾಗಿದ್ದು ಅವುಗಳಲ್ಲಿ ೧೨೯ ಸರಿಯಿವೆ. ಇದು ವ್ಯಾಪಂ ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಯ ಕೈವಾಡವನ್ನು ಸ್ಪಷ್ಟವಾಗಿ ಸೂಚಿಸುತ್ತದೆ.
ಮಧ್ಯಪ್ರದೇಶದ ವೃತ್ತಿಪರ ಪರೀಕ್ಷಾ ಸಮಿತಿಯಲ್ಲಿ ಈ ಅವ್ಯವಹಾರಗಳು ಉತ್ತುಂಗದಲ್ಲಿದ್ದಾಗ ಪ್ರೇಮಚಂದ್ರ ಮುಖ್ಯಮಂತ್ರಿಗಳ ಖಾಸಗಿ ಕಾರ್ಯದಶಿಯಾಗಿದ್ದರು. ವ್ಯಾಪಂ ಹಗರಣದಲ್ಲಿ ಪ್ರೇಮಚಂದ್ರ ಮತ್ತು ಅವರ ಪುತ್ರಿಯವರನ್ನು ಆಪಾದಿತರೆಂದು ಹೆಸರಿಸಲಾಗಿದೆ.
ವ್ಯಾಪಂ ಹಗರಣದ ಎರಡನೆ ಸುತ್ತಿನ ತನಿಖೆಯ ಕೆಲವು ದಾಖಲೆಗಳು ಕೂಡ ಲಭ್ಯವಾಗಿದ್ದು, ೧೯ ಜನರ ಒ ಎಂ ಆರ್ ಉತ್ತರ ಪತ್ರಿಕೆಯನ್ನು ತಿದ್ದಿರುವುದು ತಿಳಿದುಬಂದಿದೆ. ಮೊದಲ ಸುತ್ತಿನ ತನಿಖೆಯಲ್ಲಿ 394 ಅರ್ಜಿದಾರರ ಫಲಿತಾಂಶವನ್ನು ತಡೆಹಿಡಿಯಲಾಗಿತ್ತು ಆದರೆ ೧೯ ಜನರಲ್ಲಿ ೧೪ ಜನ ಕೋರ್ಟ್ ಮೊರೆ ಹೋದದ್ದರಿಂದ, ಕೋರ್ಟ್ ಈ ೧೪ ಜನರ ಪರವಾಗಿ ತೀರ್ಪು ನೀಡಿತ್ತು. ಅವರಲ್ಲಿ ಅನಿತಾ ಕೂಡ ಒಬ್ಬರು.
ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಮುಖ್ಯಮಂತ್ರಿ ಚೌಹಾನ್ ಅವರ ನೇರ ಭಾಗಿತ್ವ ವ್ಯಾಪಂ ಹಗರಣದಲ್ಲಿ ಕಂಡು ಬಂದಿಲ್ಲವದರೂ ಪ್ರೇಮಚಂದ್ರ ಮತ್ತು ಮುಖ್ಯಮಂತ್ರಿಗಳ ಪತ್ನಿ ಸಾಧನ ಸಿಂಗ್ ಇವರುಗಳು ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿರುವುದು, ಎಲ್ಲರ ಗಮನ ಈಗ ಮುಖ್ಯಮಂತ್ರಿಗಳತ್ತ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


