ಪ್ರಧಾನ ಸುದ್ದಿ

ಈದ್ ಸಂಭ್ರಮಾಚರಣೆ; ಮುಂಜಾಗ್ರತಾ ಕ್ರಮವಾಗಿ ಮುಜಪ್ಫರ್ ನಗರದಲ್ಲಿ ನಿಷೇಧಾಜ್ಞೆ

ಬರಲಿರುವ ಈದ್ ಸಂಭ್ರಮ ಮತ್ತು ಕವಾಡ್ ಯಾತ್ರೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮುಜಪ್ಫರ್ ನಗರ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಈದ್ ಸಂಭ್ರಮಾಚರಣೆ; ಮುಂಜಾಗ್ರತಾ ಕ್ರಮವಾಗಿ ಮುಜಪ್ಫರ್ ನಗರದಲ್ಲಿ ನಿಷೇಧಾಜ್ಞೆ
ಕವಾಡ್ ಯಾತ್ರೆ (ಸಂಗ್ರಹ ಚಿತ್ರ)
Published On :

ಮುಜಪ್ಫರ್ ನಗರ: ಬರಲಿರುವ ಈದ್ ಸಂಭ್ರಮ ಮತ್ತು ಕವಾಡ್ ಯಾತ್ರೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮುಜಪ್ಫರ್ ನಗರ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಸಿ ಆರ್ ಪಿ ಸಿ ೧೪೪ರಡಿ ನಿಷೇಧಾಜ್ಞೆ ಜಾರಿ ಮಾಡಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ನಾಲ್ಕು ಜನಕ್ಕಿಂತ ಹೆಚ್ಚಿನ ಮಂದಿ ಒಗ್ಗೂಡುವುದು, ಶಸ್ತ್ರಾಸ್ತ್ರ-ಬಂದೂಕುಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಕೊಂಡೊಯ್ಯುವುದು, ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಮೆಜೆಸ್ಟ್ರೆಟ್ ಇಂದರಮಾಣಿ ತ್ರಿಪಾಠಿ ಇಂದು ತಿಳಿಸಿದ್ದಾರೆ.

ಕವಾಡ್ ಯಾತ್ರೆ ಆಗಸ್ಟ್ ೧ ರಿಂದ ಪ್ರಾರಂಭವಾಗಲಿದೆ ಮಾತು ನಿಷೇಧಾಜ್ಞೆ ಸೆಪ್ಟಂಬರ್ ೧೩ರವರೆಗೆ ಮುಂದುವರೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.