ಚತ್ತೀಸ್ ಘರ್ ನಲ್ಲಿ ನಾಲ್ಕು ಅಪಹೃತ ಪೊಲೀಸರನ್ನು ಕೊಂದ ಮಾವೋವಾದಿಗಳು
ಚತ್ತೀಸ್ ಘರ್ ನಲ್ಲಿ ಭಾರತೀಯ ಮಾವೋವಾದಿ ಬಂಡುಕೋರರು ಅಪಹರಿಸಿದ್ದ ನಾಲ್ಕೂ ಜನ ಪೊಲೀಸರನ್ನು ಕೊಂದಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಯಪುರ: ಚತ್ತೀಸ್ ಘರ್ ನಲ್ಲಿ ಭಾರತೀಯ ಮಾವೋವಾದಿ ಬಂಡುಕೋರರು ಅಪಹರಿಸಿದ್ದ ನಾಲ್ಕೂ ಜನ ಪೊಲೀಸರನ್ನು ಕೊಂದಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಜಾಪುರ ಜಿಲ್ಲೆಯ ತೀವ್ರ ಮಾವೋವಾದಿ ಚಟುವಟಿಕೆಯುಳ್ಳ ಕುಟ್ರು ಗ್ರಾಮದ ಬಳಿ ಬಸ್ಸಿನಲ್ಲಿ ತೆರಳುತ್ತಿದ್ದ ಭದ್ರತಾ ಪಡೆಯ ವಾಹನವನ್ನು ಗೆರಿಲ್ಲಾಗಳು ಸೋಮವಾರ ರಾತ್ರಿ ತಡೆದು ನಿಲ್ಲಿಸಿದ್ದರು.
"ನಾಲ್ಕು ಜನ ಅಪಹೃತ ಪೋಲಿಸರನ್ನು ಮಾವೋವಾದಿಗಳು ಕೊಂದಿದ್ದಾರೆ ಎಂದು ನಮಗೆ ತಿಳಿದುಬಂದಿದೆ. ಕಾಡಿನ ಪ್ರದೇಶದಲ್ಲಿ ರಸ್ತೆಬದಿಯಲ್ಲಿ ಮೃತದೇಹಗಳನ್ನು ಎಸೆಯಲಾಗಿದೆ" ಎಂದು ಪೊಲೀಸ್ ಮಹಾನಿರ್ದೇಶಕ ಕೆ ಎಲ್ ಧೃವ್ ತಿಳಿಸಿದ್ದಾರೆ.
"ಈ ಕೃತ್ಯಕ್ಕೆ ಕಾರಣರಾದವರನ್ನು ಪೊಲೀಸರು ಕಾಡಿನಲ್ಲಿ ಹುಡುಕುತ್ತಿದ್ದಾರೆ" ಎಂದು ಕೂಡ ಅವರು ತಿಳಿಸಿದ್ದಾರೆ.
ಪೊಲೀಸರನ್ನು ಅಪಹರಿಸಿದ ಸ್ಥಳದ ಸಮೀಪದಲ್ಲೇ ಮೃತ ದೇಹಗಳು ಕೂಡ ಪತ್ತೆಯಾಗಿವೆ. ಆದುದರಿಂದ ಅಪಹರಣ ಆದ ಕೂಡಲೇ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎಂಬ ವಾದ ಸಂದೇಹಾಸ್ಪದವಾಗಿ ಕಂಡುಬಂದಿದೆ.
ಬಡ ಬುಡಕಟ್ಟು ಅಲ್ಪಸಂಖ್ಯಾತರು ಮತ್ತು ರೈತರ ಪರವಾಗಿ ನಾವು ಹೋರಾಡುತ್ತಿದೇವೆ ಎಂದು ಹೇಳಿಕೊಳ್ಳುವ ಮಾವೋವಾದಿಗಳು ಕೇಂದ್ರ ಮತ್ತು ಪೂರ್ವ ಭಾರತೀಯ ರಾಜ್ಯಗಳಲ್ಲಿ ಸರ್ಕಾರವನ್ನು ಹೊರದಬ್ಬಲು ಹಿಂಸಾತ್ಮಕ ಹೋರಾಟ ನಡೆಸಿವೆ.
ಮಾವೋವಾದಿ ಬಂಡುಕೋರರು ದೇಶದ ಆಂತರಿಕ ಭದ್ರತೆಗೆ ಗಂಬೀರವಾದ ಸವಾಲು ಎನ್ನುತ್ತದೆ ಸರ್ಕಾರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


